ಬ್ರಿಟನ್‌ ಮಾಜಿ ಪ್ರಧಾನಿ ಟ್ರಸ್ ಗೆ ವಾರ್ಷಿಕ 1 ಕೋಟಿ. ರೂ. ಭತ್ಯೆ

Update: 2022-10-21 17:23 GMT

ಲಂಡನ್, ಅ.21: ಪ್ರಧಾನಿಯ ಹುದ್ದೆಯಲ್ಲಿ ಕೇವಲ 45 ದಿನವಿದ್ದರೂ ಲಿಝ್ ಟ್ರಸ್(Liz Truss) ವಾರ್ಷಿಕ 1.05 ಕೋಟಿ ರೂ. ಭತ್ಯೆ ಪಡೆಯಲು ಅರ್ಹರಾಗಿದ್ದಾರೆ ಎಂದು `ದಿ ಇಂಡಿಪೆಂಡೆಂಟ್'(``The Independent'') ವರದಿ ಮಾಡಿದೆ.

ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮಾಜಿ ಪ್ರಧಾನಿಗಳಿಗೆ `ಸಾರ್ವಜನಿಕ ಕರ್ತವ್ಯ ವೆಚ್ಚ ಭತ್ಯೆ'(``Public Duty Expense Allowance'') ನೀಡುವ ಕಾನೂನನ್ನು 1991ರಲ್ಲಿ ಬ್ರಿಟನ್ ಅಂಗೀಕರಿಸಿದೆ. ಬ್ರಿಟನ್ನ ಪ್ರಧಾನಿಯಾಗಿದ್ದ ಮಾರ್ಗರೇಟ್ ಥ್ಯಾಚರ್ ರಾಜೀನಾಮೆ ಘೋಷಿಸಿದ ಬಳಿಕ ಪ್ರಧಾನಿಯಾಗಿದ್ದ ಜಾನ್ ಮೇಜರ್ ಈ ನಿಯಮ ಜಾರಿಗೆ ತಂದಿದ್ದರು.

ಸಾರ್ವಜನಿಕ ಕರ್ತವ್ಯ ಪೂರೈಸುವುದನ್ನು ಮುಂದುವರಿಸುವ ವಾಸ್ತವ ವೆಚ್ಚ ಭರಿಸಲು ಈ ಭತ್ಯೆ ಪಾವತಿಸಲಾಗುತ್ತದೆ ಎಂದು ಸರಕಾರದ ವೆಬ್ಸೈಟ್ ಹೇಳಿದೆ. ಇದೀಗ  ಟ್ರಸ್ ತನ್ನ  ಉಳಿದ ಜೀವಿತಾವಧಿಯಲ್ಲಿ ಈ ಭತ್ಯೆ ಪಡೆಯಲಿದ್ದಾರೆ. ಇದರೊಂದಿಗೆ ಈ ಸೌಲಭ್ಯ ಪಡೆಯುವ, ಈಗ ಬದುಕುಳಿದಿರುವ ಬ್ರಿಟನ್ನ 6ನೇ ಪ್ರಧಾನಿಯಾಗಿದ್ದಾರೆ ಲಿಝ್  ಟ್ರಸ್.  ಆದರೆ ಟ್ರಸ್ಗೆ ಈ ಭತ್ಯೆಯ ಸೌಲಭ್ಯ ನೀಡುವುದಕ್ಕೆ ಹಲವರು ವಿರೋಧ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News