ಪಾಕಿಸ್ತಾನದಲ್ಲಿ ವಾರ್ಷಿಕ ಹಣದುಬ್ಬರ ಶೇ. 27.13: ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ

Update: 2022-10-23 02:36 GMT
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ವಿನಾಶಕಾರಿ ಪ್ರವಾಹ ಹಾಗೂ ಕುಸಿಯುತ್ತಿರುವ ಆರ್ಥಿಕತೆಯ ಕಾರಣದಿಂದ ಪಾಕಿಸ್ತಾನದಲ್ಲಿ ವಾರ್ಷಿಕ ಹಣದುಬ್ಬರ ಈ ವಾರ ಶೇ. 27.13ನ್ನು ತಲುಪಿದೆ. ದೇಶದಲ್ಲಿ ಸಾಪ್ತಾಹಿಕ ಹಣದುಬ್ಬರ ಶೇ. 0.35ರಷ್ಟು ಹೆಚ್ಚಿದ್ದು, ವಾರ್ಷಿಕ ಹಣದುಬ್ಬರ ಶೇ. 27.13ರಷ್ಟಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ (The Express Tribune) ವರದಿ ಮಾಡಿದೆ.

ಫೆಡರಲ್ ಬ್ಯೂರೊ ಆಫ್ ಸ್ಟಟಿಸ್ಟಿಕ್ಸ್‌ (Federal Bureau of Statistics)ನ ಸಾಪ್ತಾಹಿಕ ಹಣದುಬ್ಬರ ವರದಿಯ ಪ್ರಕಾರ, ಕನಿಷ್ಠ 23 ಅಗತ್ಯ ವಸ್ತುಗಳು ತುಟ್ಟಿಯಾಗಿವೆ ಹಾಗೂ 14 ವಸ್ತುಗಳ ಬೆಲೆ ಇತ್ತೀಚಿನ ವಾರಗಳಲ್ಲಿ ಕುಸಿತಗೊಂಡಿದೆ. 14 ವಸ್ತುಗಳ ಬೆಲೆ ಸ್ಥಿರವಾಗಿದೆ.

ಉಪ್ಪಿನ ಬೆಲೆ ಶೇ. 4.84ರಷ್ಟು ಹೆಚ್ಚಿದ್ದು, ಟೊಮ್ಯಾಟೊ ಬೆಲೆ ಶೇಕಡ 2.63, ಹಾಲಿನ ಬೆಲೆ ಶೇಕಡ 2.22, ಚಹಾ ಬೆಲೆ ಶೇಕಡ 1.24 ಏರಿಕೆಯಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವಿವರಿಸಿದೆ.

ಅಂಕಿ ಅಂಶಗಳ ಪ್ರಕಾರ ಮಾಸಿಕ 17,732 ರೂ. ಆದಾಯ ಹೊಂದಿರುವವರಿಗೆ ಹಣದುಬ್ಬರ ಶೇ. 22.65ರಷ್ಟಾಗಿದ್ದರೆ, 22,889 ರಿಂದ 29,517 ರೂ. ಮಾಸಿಕ ಆದಾಯ ಹೊಂದಿರುವವರಿಗೆ ಶೇ. 26.14ರಷ್ಟಾಗಿದೆ. 29,518ರಿಂದ 44,175 ರೂ. ಮಾಸಿಕ ಆದಾಯ ಹೊಂದಿರುವವರಿಗೆ ಹಣದುಬ್ಬರ ದರ 32.58ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ ಅಂಶ ವಿವರಿಸಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News