ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್ ಪಿಂಗ್ ಮುಂದುವರಿಕೆ

Update: 2022-10-23 06:51 GMT
ಕ್ಸಿ ಜಿನ್‌ಪಿಂಗ್, Photo:twitter

ಬೀಜಿಂಗ್: ಕ್ಸಿ ಜಿನ್‌ಪಿಂಗ್ ಅವರು ಐತಿಹಾಸಿಕ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.  ಮಾವೋ ಝೆಡಾಂಗ್ ನಂತರ ರಾಷ್ಟ್ರದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ.

ಚೀನೀ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಕ್ಸಿ ಅವರನ್ನು ಇನ್ನೂ  ಐದು ವರ್ಷಗಳ ಅವಧಿಗೆ ತನ್ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತು.

ಕ್ಸಿ ಜಿನ್‌ಪಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ "ವಿಶ್ವವಿಲ್ಲದೆ ಚೀನಾ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಹಾಗೂ  ಜಗತ್ತಿಗೆ ಚೀನಾದ ಅಗತ್ಯವಿದೆ  ಎಂದು ಹೇಳಿದರು.

ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್‌ನ ಮುಖ್ಯಸ್ಥರಾಗಿಯೂ ಕ್ಸಿ ಮರು ನೇಮಕಗೊಂಡಿದ್ದಾರೆ.

69 ವರ್ಷ ವಯಸ್ಸಿನ ಅವರು ಚೀನಾದ ಅಧ್ಯಕ್ಷರಾಗಿ ಮೂರನೇ ಅವಧಿಗೆ ಮುಂದುವರಿಯುವುದು ಖಚಿತವಾಗಿದೆ, ಮಾರ್ಚ್‌ನಲ್ಲಿ ಸರಕಾರದ ವಾರ್ಷಿಕ ಶಾಸಕಾಂಗ ಅಧಿವೇಶನದಲ್ಲಿ ಔಪಚಾರಿಕವಾಗಿ ಘೋಷಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News