×
Ad

​ಇರಾನ್ ನ ಹಿಜಾಬ್ ವಿರೋಧಿ ಪ್ರತಿಭಟನೆ ಬೆಂಬಲಿಸಿ ಅಮೆರಿಕದಲ್ಲಿ ಜಾಥಾ

Update: 2022-10-23 22:14 IST
PHOTO SOURCE: TWITTER

ವಾಷಿಂಗ್ಟನ್, ಅ.23: ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಅಮೆರಿಕದಲ್ಲಿ ಇರಾನ್ ಮೂಲದವ ರೂ ಸೇರಿದಂತೆ ಸಾವಿರಾರು ಜನರು ಜಾಥಾ ನಡೆಸಿದ್ದಾರೆ ಎಂದು ವರದಿಯಾಗಿದೆ.ವಾಷಿಂಗ್ಟನ್‌ನ ನ್ಯಾಷನಲ್ ಮಾಲ್‌ನಿಂದ ಶ್ವೇತಭವನದ ವರೆಗೆ ನಡೆದ ಜಾಥಾದಲ್ಲಿ ‘ಮಹಿಳೆ, ಬದುಕು, ಸ್ವಾತಂತ್ರ್ಯ’, ಇರಾನ್‌ಗೆ ನ್ಯಾಯ’ ಮುಂತಾದ ಘೋಷಣೆಗಳನ್ನು ಕೂಗಿದರು. ವಾಷಿಂಗ್ಟನ್‌ನಲ್ಲಿ ಇದುವರೆಗೆ ಇಂತಹ 5 ಪ್ರತಿಭಟನಾ ಜಾಥಾ ನಡೆದಿದ್ದು ಶನಿವಾರದ ಜಾಥಾದಲ್ಲಿ 10,000ಕ್ಕೂ ಅಧಿಕ ಜನತೆ ಪಾಲ್ಗೊಂಡಿದ್ದರು ಎಂದು ಜಾಥಾ ಸಂಘಟಕರಲ್ಲಿ ಒಬ್ಬರಾದ ಸಿಯಾಮಕ್ ಅರಮ್‌ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆ ಬೆಂಬಲಿಸಿ ಜರ್ಮನಿಯ ಬರ್ಲಿನ್ ಹಾಗೂ ಜಪಾನ್‌ನ ಟೋಕಿಯೋದಲ್ಲೂ ಪ್ರತಿಭಟನಾ ಜಾಥಾ ನಡೆದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News