ಸಲ್ಮಾನ್ ರಶ್ದಿಯ ಒಂದು ಕಣ್ಣಿನ ದೃಷ್ಟಿ ನಷ್ಟ: ವರದಿ

Update: 2022-10-23 18:22 GMT
SALMAN RUSHDIE(PHOTO: PTI)

ನ್ಯೂಯಾರ್ಕ್, ಅ.23: ಆಗಸ್ಟ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಸಾಹಿತಿ ಸಲ್ಮಾನ್ ರಶ್ದಿಯ ಒಂದು ಕಣ್ಣಿನ ದೃಷ್ಟಿ ನಷ್ಟವಾಗಿದೆ ಮತ್ತು ಒಂದು ಕೈಯನ್ನು ಬಳಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ರಶ್ದಿಯವರ ಏಜೆಂಟ್‌ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

 ರಶ್ದಿಯವರ ಮೇಲೆ ಚೂರಿಯಿಂದ ಎದೆ ಮತ್ತು ಹಣೆಗೆ ಚೂರಿಯಿಂದ 12 ಬಾರಿ ದಾಳಿ ನಡೆದಿದ್ದು ಇದೊಂದು ಕ್ರೂರ ದಾಳಿಯಾಗಿದೆ. ಅವರ ಕತ್ತಿನ ಭಾಗಕ್ಕೂ ಗಾಯವಾಗಿದೆ. ದೇಹದ ಹಲವೆಡೆ ಆಳವಾದ ಗಾಯಗಳಾಗಿದ್ದು ಒಂದು ಕಣ್ಣಿನ ದೃಷ್ಟಿ, ಒಂದು ಕೈಯ ಮೇಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News