ಕೆನ್ಯಾದಲ್ಲಿ ಪಾಕ್ ಪತ್ರಕರ್ತನ ಗುಂಡಿಕ್ಕಿ ಹತ್ಯೆ

Update: 2022-10-24 15:44 GMT
Photo : NDTV

ನೈರೋಬಿ, ಅ.24: ಪಾಕಿಸ್ತಾನದ ದೇಶಭ್ರಷ್ಟ ಪತ್ರಕರ್ತ ಅರ್ಷದ್ ಶರೀಫ್(Arshad Sharif) ರನ್ನು ಕೆನ್ಯಾ(Kenya)ದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಅವರ ಪತ್ನಿ ಸೋಮವಾರ ಹೇಳಿದ್ದಾರೆ.

ನಾನು ಸ್ನೇಹಿತ, ಪತಿ ಮತ್ತು ನನ್ನ ನೆಚ್ಚಿನ ನಿರೂಪಕನನ್ನು ಕಳೆದುಕೊಂಡಿದ್ದೇನೆ. ಪೊಲೀಸರ ಪ್ರಕಾರ ಅವರನ್ನು ಕಿನ್ಯಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಶರೀಫ್ ಪತ್ನಿ ಜವೇರಿಯಾ ಸಿದ್ಧಿಕ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಪ್ರಮುಖ ಸುದ್ಧಿನಿರೂಪಕರಲ್ಲಿ ಒಬ್ಬರಾದ ಶರೀಫ್  ದೇಶದ್ರೋಹದ ಆರೋಪ ಎದುರಿಸುತ್ತಿದ್ದು ಬಂಧನವನ್ನು ತಪ್ಪಿಸಿಕೊಳ್ಳಲು ಕೆಲ ತಿಂಗಳ ಹಿಂದೆ ದೇಶ ಬಿಟ್ಟು ತೆರಳಿದ್ದರು.

ಪಾಕಿಸ್ತಾನದ ಸೇನಾ ವ್ಯವಸ್ಥೆಯ ಬಗ್ಗೆ ಟೀಕಿಸುತ್ತಿದ್ದ ಶರೀಫ್, ಮಾಜಿ ಪ್ರಧಾನಿ ಇಮ್ರಾನ್‌ ಖಾನ್ (Imran Khan)ಅವರ ಬೆಂಬಲಿಗರಾಗಿದ್ದರು. ಎಆರ್ಐ ಟಿವಿ  ವಾಹಿನಿಯ ನಿರೂಪಕರಾಗಿದ್ದ ಅವರು, ಆಗಸ್ಟ್ ನಲ್ಲಿ ಹಿರಿಯ ವಿಪಕ್ಷ ಮುಖಂಡ ಶಹಬಾಝ್ ಗಿಲ್ರನ್ನು ಸಂದರ್ಶನ ಮಾಡಿದ್ದರು. ಆಗ ʼಗಿಲ್ ಸಶಸ್ತ್ರ ಪಡೆಗಳ ಕಿರಿಯ ಅಧಿಕಾರಿಗಳು ಬಹುಮತದ ಇಚ್ಛೆಗೆ ವಿರುದ್ಧವಾದ ಆದೇಶಗಳನ್ನು ಪಾಲಿಸಬಾರದು' ಎಂದಿದ್ದರು. ಈ ಹೇಳಿಕೆ ಪ್ರಸಾರವಾಗುತ್ತಿದ್ದಂತೆಯೇ ಶರೀಫ್ ರ ಬಂಧನಕ್ಕೆ ವಾರಾಟ್ ಜಾರಿಯಾಗಿದ್ದು ಅವರು ದೇಶ ಬಿಟ್ಟು ತೆರಳಿದ್ದರು. ಪತ್ರಕರ್ತ ಶರೀಫ್ ಹತ್ಯೆಯನ್ನು ಪಾಕ್ ವಿದೇಶಾಂಗ ಇಲಾಖೆ ದೃಢಪಡಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News