ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ವೇತನ: ಬಿಸಿಸಿಐ ಘೋಷಣೆ

Update: 2022-10-27 07:48 GMT

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಮಹತ್ವದ ಘೋಷಣೆ ಹೊರಡಿಸಿದ್ದು, ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ರೀತಿ ಆಗಿರಲಿದೆ ಎಂದು ಹೇಳಿದೆ. ಪಂದ್ಯ ಶುಲ್ಕ ವಿಷಯದಲ್ಲಿ ಮಹಿಳಾ ಕ್ರಿಕೆಟಿಗರನ್ನು ಪುರುಷ ಕ್ರಿಕೆಟಿಗರಿಗೆ ಸರಿಸಮನಾಗಿ ತರುವ ನಿರ್ಧಾರವು ಹಲವು ರೀತಿಯಲ್ಲಿ ಕ್ರಾಂತಿಕಾರಿ ನಿರ್ಧಾರವಾಗಿದೆ. ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು ಪುರುಷ ಕ್ರಿಕೆಟಿಗರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

"ತಾರತಮ್ಯವನ್ನು ಎದುರಿಸಲು @BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ನಮ್ಮ ಒಪ್ಪಂದದ ಪ್ರಕಾರ ಮಹಿಳಾ ಕ್ರಿಕೆಟಿಗರಿಗೆ ನಾವು ವೇತನ ಸಮಾನ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಕಾಲಿಟ್ಟಂತೆ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಮಹಿಳಾ ಕ್ರಿಕೆಟಿಗರಿಗೆ ಅವರ ಪುರುಷ ಕ್ರಿಕೆಟಿಗರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್ ( 15 ಲಕ್ಷ ರೂ.), ಏಕದಿನ ಪಂದ್ಯ (6 ಲಕ್ಷ ರೂ.), T20I (3 ಲಕ್ಷ ರೂ.) ಅನ್ನು ಪಾವತಿಸುವುದು ನಮ್ಮ ಮಹಿಳಾ ಕ್ರಿಕೆಟಿಗರಿಗೆ ನನ್ನ ಬದ್ಧತೆಯಾಗಿದೆ ಮತ್ತು ಅವರ ಬೆಂಬಲಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್‌ಗೆ ಧನ್ಯವಾದ ಹೇಳುತ್ತೇನೆ. ಜೈ ಹಿಂದ್" ಎಂದು ಶಾ ಟ್ವೀಟ್‌ ಮಾಡಿದ್ದಾರೆ.

Similar News