×
Ad

ಥೈಲ್ಯಾಂಡ್ ನಲ್ಲಿ ಬಂಧನದಲ್ಲಿರುವ ಉಯಿಗರ್‌ಗಳಿಗೆ ಗಡೀಪಾರಿನ ಭಯ: ವರದಿ

Update: 2022-10-28 23:15 IST

ಬ್ಯಾಂಕಾಕ್, ಅ.28: ಸುಮಾರು 1 ದಶಕದ ಹಿಂದೆ ಚೀನಾ(China)ದಿಂದ ಪಲಾಯನ ಮಾಡಿದ 50ಕ್ಕೂ ಅಧಿಕ ಉಯಿಗರ್ ಮುಸ್ಲಿಮರು (Uighurs are Muslims)ಥೈಲ್ಯಾಂಡ್ನ ಬಂಧನ ಕೇಂದ್ರದಲ್ಲಿದ್ದು ಚೀನಾಕ್ಕೆ ಮರಳಿ ಕಳುಹಿಸುವ ನಿರಂತರ ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು  ವರದಿಯಾಗಿದೆ.

1990ರಿಂದಲೂ ಅಲ್ಪಸಂಖ್ಯಾತ ಉಯಿಗರ್ (Minority Uyghur)ಸಮುದಾಯದವರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಆರೋಪ  ಚೀನಾದ ಮೇಲಿದೆ. ಬಹುತೇಕ ಮುಸ್ಲಿಮ್ ಅಲ್ಪಸಂಖ್ಯಾತರಿರುವ ಉಯಿಗರ್ ಸಮುದಾಯವನ್ನು ಚೀನ ನಡೆಸಿಕೊಳ್ಳುತ್ತಿರುವ ರೀತಿ ನರಮೇಧಕ್ಕೆ ಸಮವಾಗಿದೆ ಎಂದು ಅಮೆರಿಕ ಆರೋಪಿಸುತ್ತಿದೆ. ವೃತ್ತಿಪರ ತರಬೇತಿ ಕೇಂದ್ರ ಎಂದು ಚೀನಾ ಹೇಳುತ್ತಿರುವ ಬಂಧನ ಕೇಂದ್ರದಲ್ಲಿರುವ  ಉಯಿಗರ್ಗಳ ವಿರುದ್ಧ ಚಿತ್ರಹಿಂಸೆ, ಬಲವಂತವಾಗಿ ದುಡಿಸಿಕೊಳ್ಳುವುದು  ಮುಂತಾದ ದೌರ್ಜನ್ಯ ನಡೆಯುತ್ತಿದೆ ಕಳೆದ ಆಗಸ್ಟ್ನಲ್ಲಿ ಬಿಡುಗಡೆಗೊಂಡಿರುವ ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದಿಂದ ಪಲಾಯನ ಮಾಡಿರುವ ಹಲವು ಉಯಿಗರ್ಗಳು ಮ್ಯಾನ್ಮಾರ್ ಮೂಲಕ ಥೈಲ್ಯಾಂಡ್ಗೆ ತೆರಳಿದ್ದು ಅಲ್ಲಿ ಬಂಧನ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಅತ್ತ ಚೀನಾದ ಕೆಂಗಣ್ಣಿಗೂ ಗುರಿಯಾಗದೆ, ಇತ್ತ ಅಮೆರಿಕದ ಅಸಮಾಧಾನಕ್ಕೂ ಕಾರಣವಾಗದ ರೀತಿಯಲ್ಲಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಥೈಲ್ಯಾಂಡ್ ಸರಕಾರ ಹೆಣಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  2013 ಮತ್ತು 2014ರಿಂದ ಹಲವು  ಉಯಿಗರ್ಗಳನ್ನು ಥೈಲ್ಯಾಂಡ್ ಸುತ್ತಮುತ್ತಲಿನ ವಲಸೆ ಕೇಂದ್ರದಲ್ಲಿ ಇರಿಸಲಾಗಿದೆ. 2015ರಲ್ಲಿ 109 ಉಯಿಗರ್ಗಳನ್ನು ಬಲವಂತವಾಗಿ ಚೀನಾಕ್ಕೆ ಗಡೀಪಾರು ಮಾಡಲಾಗಿದ್ದು ಇನ್ನುಳಿದವರು ಗಡೀಪಾರು ಆಗುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ ಎಂದು ಥೈಲ್ಯಾಂಡ್ನ ಮಾನವ ಹಕ್ಕು ಸಂಘಟನೆಯ ಅಧಿಕಾರಿಗಳು ಹೇಳಿದ್ದಾರೆ.

Similar News