ಯುರೋಪ್ ಒಕ್ಕೂಟದಿಂದ ರಶ್ಯನ್ನರ 17 ಶತಕೋಟಿ ಡಾಲರ್ ಆಸ್ತಿ ಮುಟ್ಟುಗೋಲು

Update: 2022-10-29 17:21 GMT

ಬ್ರುಸೆಲ್ಸ್,ಅ.29: ರಶ್ಯನ್ ಸೇನೆಯು ಉಕ್ರೇನ್ ಮೇಲೆ ಆಕ್ರಮಣ ನಡೆಸಿದಾಗಿನಿಂದ ಯುರೋಪ್ ಒಕ್ಕೂಟವು ರಶ್ಯನ್ನರಿಗೆ ಸೇರಿದ 17 ಶತಕೋಟಿ ಡಾಲರ್ ವೌಲ್ಯದ ಆಸ್ತಿಗಳಿಗೆ ಮುಟ್ಟುಗೋಲು ಹಾಕಿದೆಯೆಂದು ಎಂದು ಯುರೋಪ್‌ನ ನ್ಯಾಯಾಂಗ ಆಯುಕ್ತ ಡಿಡಿಯರ್ ರೆಂಡರ್ಸ್‌(Didier Renders) ತಿಳಿಸಿದ್ದಾರೆ.

  ಜರ್ಮನ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಅವರು ‘‘ ಈವರೆಗೆ ಯುರೋಪ್ ಒಕ್ಕೂಟದ ಏಳು ಸದಸ್ಯ ರಾಷ್ಟ್ರಗಳಲ್ಲಿ ರುವ 90 ಮಂದಿ ರಶ್ಯನ್ನರ 17 ಶತಕೋಟಿ ಡಾಲರ್ ವೌಲ್ಯದ ಆಸ್ತಿಗಳಿಗೆ ಮುಟ್ಟುಗೋಲು ಹಾಕಲಾಗಿದೆ’’

  ಮುಟ್ಟುಗೋಲು ಹಾಕಲಾದ ಈ ಆಸ್ತಿಗಳನ್ನು ಯುದ್ಧಾನಂತರ ಉಕ್ರೇನ್‌ನ ಪುನರ್‌ನಿರ್ಮಾಣಕ್ಕೆ ಬಳಸಬೇಕೆಂದು ಉಕ್ರೇನ್ ಅಧಿಕಾರಿಗಳು ಕರೆ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘‘ ಯುರೋಪ್ ಒಕ್ಕೂಟದಲ್ಲಿ ವಶಪಡಿಸಿಕೊಳ್ಳಲಾದ ಹಣವು ಕ್ರಿಮಿನಲ್ ರೂಪದ್ದಾಗಿದ್ದರೆ ಅದನ್ನು ಉಕ್ರೇನ್‌ಗೆ ಪರಿಹಾರ ನಿಧಿಯಾಗಿ ವರ್ಗಾಯಿಸಲು ಸಾಧ್ಯವಿದೆ’’ ಎಂದು ಹೇಳಿದ್ದಾರೆ.

ಆದರೆ ಉಕ್ರೇನ್‌ನ ಪುನರ್‌ನಿರ್ಮಾಣಕ್ಕೆ ನೆರವಾಗಲು ಈ ಮೊತ್ತವು ಏನೂ ಸಾಕಾಗದು ಎಂದು ಅವರು ಹೇಳಿದ್ದಾರೆ.

Similar News