ಟ್ವೆಂಟಿ-20 ವಿಶ್ವಕಪ್ ಇತಿಹಾಸದಲ್ಲಿ 1,000 ರನ್ ಪೂರೈಸಿದ 2ನೇ ಬ್ಯಾಟರ್ ವಿರಾಟ್ ಕೊಹ್ಲಿ

Update: 2022-10-30 14:13 GMT

 ಹೊಸದಿಲ್ಲಿ, ಅ.30: ಟ್ವೆಂಟಿ-20 ವಿಶ್ವಕಪ್ ಇತಿಹಾಸದಲ್ಲಿ 1, 000 ರನ್ ಪೂರೈಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ Virat Kohli  ಮತ್ತೊಂದು ದಾಖಲೆ ನಿರ್ಮಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-12 ಪಂದ್ಯದಲ್ಲಿ ಕೊಹ್ಲಿ ಈ ಮೈಲಿಗಲ್ಲನ್ನು ತಲುಪಿದರು.

ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಔಟಾಗದೆ 82 ಹಾಗೂ ಔಟಾಗದೆ 62 ರನ್ ಗಳಿಸಿದ್ದ ಕೊಹ್ಲಿ ರವಿವಾರ 11 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಲುಂಗಿ ಗಿಡಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಇದೀಗ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಿರುವ 24 ಪಂದ್ಯಗಳಲ್ಲಿ ಒಟ್ಟು 1,001 ರನ್ ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ದಾಖಲೆ(31 ಪಂದ್ಯಗಳು, 1,016 ರನ್)ಮುರಿಯಲು ಕೇವಲ 16 ರನ್ ಅಗತ್ಯವಿದೆ.

ವಿಂಡೀಸ್‌ನ ಕ್ರಿಸ್ ಗೇಲ್(33 ಪಂದ್ಯಗಳು, 965 ರನ್) ಹಾಗೂ ಭಾರತದ ನಾಯಕ ರೋಹಿತ್ ಶರ್ಮಾ(36 ಪಂದ್ಯಗಳು, 919 ರನ್)ಪಟ್ಟಿಯಲ್ಲಿ ಮೂರನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ.

Similar News