ಮಂಗಳ ಗ್ರಹದಲ್ಲಿ ಪ್ರಾಚೀನ ಸಾಗರದ ಪುರಾವೆ ಪತ್ತೆ : ವರದಿ
ವಾಷಿಂಗ್ಟನ್, ಅ.31: ಮಂಗಳ ಗ್ರಹ(Mars is the planet)ದಲ್ಲಿ ವಿಶಾಲವಾದ ಸಾಗರದ ಪುರಾವೆ ಕಂಡುಬಂದಿದ್ದು ಇದು 3.5 ಶತಕೋಟಿ ವರ್ಷದ ಹಿಂದೆ ಕೆಂಪು ಗ್ರಹ(red planet)ದ ಮೇಲೆಯಲ್ಲಿ ಅಸ್ತಿತ್ವದಲ್ಲಿತ್ತು ಎಂದು ಸಂಶೋಧಕರ ತಂಡವೊಂದು ಹೇಳಿದೆ.
ಪೆನ್ನಿಸಿಲ್ವೇನಿಯಾ ಸ್ಟೇಟ್ ವಿವಿ(Pennsylvania State Vv)ಯ ಸಂಶೋಧಕರು ಇತ್ತೀಚೆಗೆ ಸ್ಥಳಾಕೃತಿ ವಿವರಣೆಯ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಸಂಸ್ಥೆಯ ಪತ್ರಿಕಾ ಹೇಳಿಕೆ ತಿಳಿಸಿದೆ. ಈ ಹಿಂದೆ ಮಂಗಳ ಗ್ರಹದಲ್ಲಿ ಸಮುದ್ರದ ಅಲೆಗಳು, ಆರ್ದ್ರ ಹವಾಮಾನವಿತ್ತು. ಈಗಿನ ಕಠಿಣ, ಹೆಪ್ಪುಗಟ್ಟಿದ, ಶುಷ್ಕ ಮತ್ತು ಧೂಳುಮಯ ಭೂದೃಶ್ಯವಲ್ಲ ಎಂದು ಈ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿನ ಅತ್ಯಂತ ಮಹತ್ವದ ಅಂಶವೆಂದರೆ, ಈ ಗಾತ್ರದ ಸಾಗರದ ಅಸ್ತಿತ್ವವು ಮಂಗಳನಲ್ಲಿ ಜೀವಿಸಲು ಹೆಚ್ಚಿನ ಸಾಧ್ಯತೆಯನ್ನು ಸೂಚಿಸುತ್ತದೆ. ಇದು ಪ್ರಾಚೀನ ಹವಾಮಾನ ಮತ್ತು ಅದರ ವಿಕಾಸದ ಬಗ್ಗೆಯೂ ಹೇಳುತ್ತದೆ. ಮತ್ತು ಒಂದು ಸಮಯದಲ್ಲಿ ಈ ಗ್ರಹದಲ್ಲಿ ಇಷ್ಟು ಪ್ರಮಾಣದ ದ್ರವ ನೀರನ್ನು ಬೆಂಬಲಿಸಲು ಸೂಕ್ತವಾದ ಹವಾಮಾನ ಇತ್ತು ಎಂಬ ಮಾಹಿತಿಯನ್ನೂ ಒದಗಿಸಿದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ, ಪೆನ್ನಿಸಿಲ್ವೇನಿಯಾ ವಿವಿಯ ಅಸಿಸ್ಟೆಂಟ್ ಪ್ರೊಫೆಸರ್ ಬೆಂಜಮಿನ್ ಕಾರ್ಡೆನಾಸ್ ಹೇಳಿದ್ದಾರೆ.