ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಹತ್ಯೆಯತ್ನ: ಇನ್ನಿಬ್ಬರು ಶಂಕಿತರ ಬಂಧನ

Update: 2022-11-04 19:01 GMT

ಲಾಹೋರ್, ನ.4: ಇಮ್ರಾನ್‌ಖಾನ್ ಹತ್ಯೆ ಪ್ರಯತ್ನದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಪಂಜಾಬ್ ಪ್ರಾಂತದ ಪೊಲೀಸರು ಇನ್ನಿಬ್ಬರು ಶಂಕಿತರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

 ಗುಂಡು ಹಾರಿಸಿದ ಆರೋಪಿ ನವೀದ್ ಮುಹಮ್ಮದ್ ಬಶೀರ್‌ಗೆ 20,000 ರೂಪಾಯಿ(ಪಾಕ್ ಕರೆನ್ಸಿ)ಗೆ ಪಿಸ್ತೂಲ್ ಮತ್ತು ಬುಲೆಟ್ ಮಾರಿದ ಆರೋಪದಲ್ಲಿ ವಖಾಸ್ ಮತ್ತು ಸಾಜಿದ್ ಬಟ್ ಎಂಬವರನ್ನು ವಝೀರಾಬಾದ್ ಪ್ರಾಂತದಿಂದ ಬಂಧಿಸಲಾಗಿದೆ. ಈ ಪಿಸ್ತೂಲ್‌ಗೆ ನಂಬರ್ ಅಥವಾ ಲೈಸೆನ್ಸ್ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Similar News