ನ್ಯಾನ್ಸಿ ಪೆಲೋಸಿಯನ್ನು 'ಪ್ರಾಣಿ' ಎಂದ ಡೊನಾಲ್ಡ್ ಟ್ರಂಪ್

Update: 2022-11-10 16:19 GMT

ವಾಷಿಂಗ್ಟನ್, ನ.10: ಓಹಿಯೊದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ(Nancy Pelosi)ಯನ್ನು `ಪ್ರಾಣಿ' ('animal')ಎಂದು ಕರೆದಿರುವುದಾಗಿ ವರದಿಯಾಗಿದೆ.

ತನ್ನ ವಿರುದ್ಧ ಕಾರಣವಿಲ್ಲದೆ ಎರಡು ಬಾರಿ ದೋಷಾರೋಪಣೆ ಮಾಡಿರುವ ಪೆಲೋಸಿ ಒಂದು ಪ್ರಾಣಿ ಎಂಬುದು ತನ್ನ ಭಾವನೆ ಎಂದಾಗ ಸಭೆಯಲ್ಲಿದ್ದವರು ಹರ್ಷೋದ್ಗಾರ ಮಾಡಿದರು. ಮತ್ತೆ ಅಧ್ಯಕ್ಷ ಹುದ್ದೆಗೆ ತನ್ನ ಉಮೇದುವಾರಿಕೆಯನ್ನು ಟ್ರಂಪ್ ಮುಂದಿನ ವಾರ ಪ್ರಕಟಿಸುವ ನಿರೀಕ್ಷೆಯಿದೆ.

ರೌಡಿಗಳ ಗುಂಪೊಂದು ಹದಿಹರೆಯದ ಯುವಕನ ಮೇಲೆ ದೌರ್ಜನ್ಯ ಮಾಡಿ ಆತನಿಗೆ ಹಲ್ಲೆ ನಡೆಸಿ, 32 ಬಾರಿ ಚೂರಿಯಿಂದ ಇರಿದಾಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಪ್ರಾಣಿಗಳು ಎಂದು ನಾನು ಕರೆದಾಗ ಪೆಲೋಸಿ ಆಕ್ಷೇಪಿಸಿದ್ದು `ರೌಡಿಗಳು  ಕೂಡಾ ಮಾನವರೇ' (``Rowdies are human too'')ಎಂದಿದ್ದಾರೆ.  ಹಾಗಾದರೆ ಪೆಲೋಸಿ ಪ್ರಾಣಿ ಎಂದು ನಾನು ಭಾವಿಸುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ.

ಪೆಲೋಸಿ ಹಾಗೂ ಟ್ರಂಪ್ ನಡುವಿನ ಸಂಬಂಧ ಹಳಸಿದೆ. ಕ್ಯಾಪಿಟಲ್ ದಂಗೆ ಪ್ರಕರಣದ ಬಳಿಕ ಮಾಧ್ಯಮದವರ ಜತೆ ಮಾತನಾಡುತ್ತಿದ್ದ ಪೆಲೋಸಿ ` ಟ್ರಂಪ್ರ ಮೂತಿಗೆ ಪಂಚ್ ನೀಡಬೇಕೆಂದು ಕಾಯುತ್ತಿದ್ದೇನೆ. ಕ್ಯಾಪಿಟಲ್ ಹಿಲ್ಸ್ ನಲ್ಲಿ ನಡೆದ ಪ್ರಕರಣಕ್ಕಾಗಿ ಟ್ರಂಪ್ ಗೆ ಪಂಚ್ ನೀಡುತ್ತೇನೆ ಮತ್ತು ಇದಕ್ಕಾಗಿ ಜೈಲಿಗೆ ಹೋದರೂ ಚಿಂತೆಯಿಲ್ಲ' ಎಂದಿದ್ದರು.

Similar News