ಅಮೆರಿಕ ದ ವಿವಿಯಲ್ಲಿ ಗುಂಡಿನ ದಾಳಿ: ಮೂವರು ಮೃತ್ಯು ಇಬ್ಬರಿಗೆ ಗಾಯ

Update: 2022-11-14 17:54 GMT

 ನ್ಯೂಯಾರ್ಕ್, ನ.14: ಅಮೆರಿಕದ ವರ್ಜೀನಿಯಾ (Virginia)ವಿವಿಯ ಕ್ಯಾಂಪಸ್ನಲ್ಲಿ ರವಿವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ರವಿವಾರ ರಾತ್ರಿ ಸುಮಾರು 10:30ರ ವೇಳೆಗೆ ವಿವಿ ಕ್ಯಾಂಪಸ್ನ ಗ್ಯಾರೇಜಿನಲ್ಲಿ ಗುಂಡಿನ ದಾಳಿ ನಡೆದಿರುವ ಮಾಹಿತಿ ತಿಳಿದೊಡನೆ ಪೊಲೀಸರು ಅಲ್ಲಿಗೆ ಧಾವಿಸಿದ್ದಾರೆ. ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಯನ್ನು ಕ್ರಿಸ್ಟೋಫರ್ ಡಾರ್ನೆಲ್ ಜೋನ್ಸ್(Christopher Darnell Jones) ಎಂದು ಗುರುತಿಸಲಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ಈತ ನೀಲಿ ಜೀನ್ಸ್, ಜಾಕೆಟ್ ಮತ್ತು ಕೆಂಪು ಶೂ ಧರಿಸಿದ್ದು ಕಪ್ಪು ಬಣ್ಣದ ಎಸ್ಯುವಿ ವಾಹನದಲ್ಲಿ ಸಂಚರಿಸುತ್ತಿದ್ದಾನೆ. ಈತನ ಬಗ್ಗೆ ತಿಳಿದು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಆರೋಪಿ ಮತ್ತೆ ದಾಳಿ ನಡೆಸುವ ಸಾಧ್ಯತೆಯಿದ್ದು ಎಚ್ಚರಿಕೆಯಿಂದ ಇರುವಂತೆ ಮತ್ತು ಅಧಿಕಾರಿಗಳ ನಿರ್ದೇಶನವನ್ನು ಪಾಲಿಸುವಂತೆ ವಿವಿಯು ಎಲ್ಲಾ ವಿದ್ಯಾರ್ಥಿಗಳಿಗೆ ಸೂಚನೆ ರವಾನಿಸಿದೆ.

Similar News