ಇರಾನ್ ಕುರಿತು ತುರ್ತು ಅಧಿವೇಶನ: ವಿಶ್ವಸಂಸ್ಥೆ ಘೋಷಣೆ
Update: 2022-11-14 23:34 IST
ಜಿನೆವಾ, ನ.14: ಇರಾನ್ನಲ್ಲಿ ಪ್ರತಿಭಟನಾಕಾರರ ದಮನ ವಿಷಯಕ್ಕೆ ಸಂಬಂಧಿಸಿ ಈ ತಿಂಗಳು ತುರ್ತು ಅಧಿವೇಶನ ನಡೆಸುವುದಾಗಿ ವಿಶ್ವಸಂಸ್ಥೆ ಮಾನವ ಹಕ್ಕು (United Nations Human Rights)ಸಮಿತಿ ಸೋಮವಾರ ಘೋಷಿಸಿದೆ.
ಇರಾನ್ನಲ್ಲಿ ಹದಗೆಡುತ್ತಿರುವ ಮಾನವಹಕ್ಕುಗಳ ಪರಿಸ್ಥಿತಿ’ ಎಂಬ ವಿಷಯದಲ್ಲಿ ನವೆಂಬರ್ 24ರಂದು ವಿಶೇಷ ಅಧಿವೇಶನ ನಡೆಯಲಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಹೇಳಿದೆ. ಇಂತಹ ಅಧಿವೇಶನಕ್ಕೆ ಆಗ್ರಹಿಸಿ ಜರ್ಮನ್ ಮತ್ತು ಐಸ್ಲ್ಯಾಂಡ್ ದೇಶಗಳು ವಿಶ್ವಸಂಸ್ಥೆಗೆ ಮನವಿ ಪತ್ರ ಸಲ್ಲಿಸಿದ್ದವು. ವಿಶೇಷ ಅಧಿವೇಶನಕ್ಕೆ ಮಾನವ ಹಕ್ಕು ಸಮಿತಿಯ 47 ಸದಸ್ಯ ದೇಶಗಳ ಪೈಕಿ 16 ಸದಸ್ಯದೇಶಗಳ ಬೆಂಬಲದ ಅಗತ್ಯವಿದೆ. ಇದುವರೆಗೆ 17 ಸಮಿತಿ ಸದಸ್ಯರ ಸಹಿತ 44 ದೇಶಗಳು ಬೆಂಬಲ ಸೂಚಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ