​ಇಬ್ಬರು ಇಸ್ರೇಲ್ ಪ್ರಜೆಗಳ ಹತ್ಯೆ

Update: 2022-11-15 17:16 GMT

ಜೆರುಸಲೇಂ, ನ.15: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ದುಷ್ಕರ್ಮಿಯೊಬ್ಬ ಹಲವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದು ಇಬ್ಬರು ಇಸ್ರೇಲ್ (Israel)ನಾಗರಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ನ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 


ಏರಿಯಲ್ ಕೈಗಾರಿಕಾ ವಲಯದ ಪ್ರವೇಶದ್ವಾರದ ಬಳಿ ಆಗಮಿಸಿದ ಭಯೋತ್ಪಾದಕ ಅಲ್ಲಿದ್ದ ಹಲವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಬಳಿಕ ಭದ್ರತಾ ಪಡೆಗಳು ಪೆಲೆಸ್ತೀನ್ ಮೂಲದ  ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ಇಸ್ರೇಲ್ ಸೇನೆ ಹೇಳಿದೆ. 


ಕೈಗಾರಿಕಾ ವಲಯದ ಬಳಿ ಇಸ್ರೇಲ್ ಸೇನೆ ವ್ಯಕ್ತಿಯೊಬ್ಬನನ್ನು  ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿಕೆ ನೀಡಿದೆ.

Similar News