ಭಾರತದ ಯುವ ವೃತ್ತಿಪರರಿಗೆ 3,000 ಬ್ರಿಟನ್ ವೀಸಾಕ್ಕೆ ಪ್ರಧಾನಿ ರಿಷಿ ಸುನಕ್ ಹಸಿರು ನಿಶಾನೆ

Update: 2022-11-16 05:06 GMT

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ Rishi Sunak ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಬ್ರಿಟನ್ ನಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿದ್ದಾರೆ.

ಇಂತಹ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ವೀಸಾ-ರಾಷ್ಟ್ರೀಯ ದೇಶ  ಭಾರತ ಎಂದು ಬ್ರಿಟಿಷ್ ಸರಕಾರ ಹೇಳಿದೆ.  ಕಳೆದ ವರ್ಷ ಒಪ್ಪಿಕೊಂಡಿರುವ ಬ್ರಿಟನ್-ಭಾರತ ವಲಸೆ ಹಾಗೂ  ಚಲನಶೀಲ ಪಾಲುದಾರಿಕೆಯ ಬಲವನ್ನು ಇದು ಎತ್ತಿ ತೋರಿಸುತ್ತದೆ.

"ಇಂದು ಬ್ರಿಟನ್-ಭಾರತ ಯುವ ವೃತ್ತಿಪರ ಯೋಜನೆ ಅನ್ನು ದೃಢೀಕರಿಸಲಾಗಿದೆ. 18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಬ್ರಿಟನ್ ಗೆ ಬಂದು ಎರಡು ವರ್ಷಗಳವರೆಗೆ ವಾಸಿಸಲು ಹಾಗೂ  ಕೆಲಸ ಮಾಡಲು ಈ ಯೋಜನೆ 3,000 ವೀಸಾಗಳನ್ನು ನೀಡುತ್ತದೆ" ಎಂದು ಬ್ರಿಟನ್ ಪ್ರಧಾನ ಮಂತ್ರಿ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

ಮಂಗಳವಾರ ಜಿ 20 ಶೃಂಗಸಭೆಯ 17 ನೇ ಆವೃತ್ತಿಯಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಮಾಡಲಾಗಿದೆ.

ಭಾರತ ಮೂಲದ ಸುನಕ್ ಕಳೆದ ತಿಂಗಳು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ಮೋದಿ ಅವರನ್ನು  ಭೇಟಿಯಾಗಿದ್ದಾರೆ.

Similar News