ಕುವೈಟ್: 7 ಜನರಿಗೆ ಗಲ್ಲುಶಿಕ್ಷೆ

Update: 2022-11-16 16:39 GMT

ಕುವೈಟ್ ಸಿಟಿ, ನ.16: ಕುವೈಟ್‍ನಲ್ಲಿ ಇಬ್ಬರು ಮಹಿಳೆಯರ ಸಹಿತ 7 ಮಂದಿಗೆ ಬುಧವಾರ  ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. 2017ರ ಬಳಿಕ ಆ ದೇಶದಲ್ಲಿ ಜಾರಿಯಾಗಿರುವ ಪ್ರಪ್ರಥಮ ಗಲ್ಲುಶಿಕ್ಷೆ ಇದಾಗಿದೆ.

ಇಥಿಯೋಪಿಯಾ(Ethiopia) ಹಾಗೂ ಕುವೈಟ್‍ನ ತಲಾ ಒಬ್ಬ ಮಹಿಳೆ, ಕುವೈಟ್‍ನ 3, ಸಿರಿಯಾ ಮತ್ತು ಪಾಕಿಸ್ತಾನದ ತಲಾ ಒಬ್ಬ ಪುರುಷನನ್ನು ಗಲ್ಲಿಗೇರಿಸಲಾಗಿದೆ.

ಗಲ್ಲು ಶಿಕ್ಷೆಯನ್ನು ತಡೆಹಿಡಿಯುವಂತೆ ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್ ಮಂಗಳವಾರ ಆಗ್ರಹಿಸಿತ್ತು. ಗಲ್ಲುಶಿಕ್ಷೆ  ಅತ್ಯಂತ ಕ್ರೂರ, ಅಮಾನವೀಯ ಶಿಕ್ಷೆಯಾಗಿದ್ದು ಕುವೈಟ್ ಅಧಿಕಾರಿಗಳು ಮರಣದಂಡನೆಗಳನ್ನು ಅಧಿಕೃತವಾಗಿ ನಿಷೇಧಿಸಬೇಕು ಎಂದು ಆ್ಯಮ್ನೆಸ್ಟಿಯ ಉಪಪ್ರಾದೇಶಿಕ  ನಿರ್ದೇಶಕಿ ಅನ್ನಾ ಗ್ವೆಲಾಲಿ ಆಗ್ರಹಿಸಿದ್ದಾರೆ.

ಗಂಭೀರ ಅಪರಾಧ ಎಸಗಿದವರನ್ನು ಶಿಕ್ಷಿಸುವುದು ಕುವೈಟ್ (Kuwait)ಅಧಿಕಾರಿಗಳ ಕರ್ತವ್ಯವಾಗಿದ್ದರೂ, ಶಂಕಿತರನ್ನು ಅಂತರಾಷ್ಟ್ರೀಯ ಕಾನೂನಿನಂತೆ ವಿಚಾರಣೆ ನಡೆಸಬೇಕು ಮತ್ತು ಕಾನೂನು ಕ್ರಮವು ಅಂತರಾಷ್ಟ್ರೀಯ ಮಾನವ ಹಕ್ಕು ಬಾಧ್ಯತೆಗಳ ಕಟ್ಟುಪಾಡಿಗೆ ಒಳಪಟ್ಟಿರಬೇಕು ಎಂದವರು ಟ್ವೀಟ್ ಮಾಡಿದ್ದಾರೆ.

Similar News