ನೇಪಾಳ: 15,000 ನಕಲಿ ಮತಪತ್ರಗಳ ಸಹಿತ ಭಾರತೀಯನ ಬಂಧನ
Update: 2022-11-16 22:08 IST
ಕಠ್ಮಂಡು, ನ.16: ನೇಪಾಳದಲ್ಲಿ 15,000 ನಕಲಿ ಮತಪತ್ರಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಬುಧವಾರ ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ದೇಶದಲ್ಲಿ ನವೆಂಬರ್ 20ರಂದು ಸಂಸತ್ಗೆ ಹಾಗೂ ಪ್ರಾಂತೀಯ ಅಸೆಂಬ್ಲಿಗೆ ಚುನಾವಣೆ(Election to the Assembly) ನಡೆಯಲಿದೆ.
ದಕ್ಷಿಣ ನೇಪಾಳದ ಪರ್ಸಾ(Persa) ಜಿಲ್ಲೆಯ ಜಗನ್ನಾಥಪುರ ಗ್ರಾಮೀಣ ನಗರಪಾಲಿಕೆ ಪ್ರದೇಶದಲ್ಲಿ ಇಝಾಜತ್ ಅಹ್ಮದ್(Izzat Ahmed) ಎಂಬ ಭಾರತೀಯ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಿಹಾರದ ನಿವಾಸಿಯಾಗಿದ್ದು, ಭಾರತದಿಂದ ನಕಲಿ ಮತಪತ್ರಗಳನ್ನು ತನ್ನ ಮೋಟಾರು ಬೈಕ್ನಲ್ಲಿ ಸಾಗಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.