ಹಾಲಿವುಡ್ ನಟ ಕೆವಿನ್ ವಿರುದ್ಧ ಇನ್ನೂ 7 ಲೈಂಗಿಕ ದೌರ್ಜನ್ಯದ ಆರೋಪ

Update: 2022-11-16 16:44 GMT

ಲಂಡನ್, ನ.16: ಹಾಲಿವುಡ್ ನಟ ಕೆವಿನ್ ಸ್ಪೇಸಿ (Kevin Spacey)ವಿರುದ್ಧ ಲೈಂಗಿಕ ದೌರ್ಜನ್ಯದ ಇನ್ನೂ 7 ಆರೋಪ ದಾಖಲಿಸಲಾಗಿದೆ ಎಂದು ಬ್ರಿಟನ್ನ `ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್(``Crown Prosecution Service)(ಸಿಪಿಎಸ್) ಬುಧವಾರ ಹೇಳಿದೆ. 


ಮೂವರು ವ್ಯಕ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ವಿಚಾರಣೆಯನ್ನು 63 ವರ್ಷದ ಕೆವಿನ್ ಎದುರಿಸುತ್ತಿರುವಂತೆಯೇ ಹೊಸದಾಗಿ 7 ಆರೋಪ ದಾಖಲಿಸಲಾಗಿದೆ. 2001ರಿಂದ 2004ರ ಅವಧಿಗೆ ಸಂಬಂಧಿಸಿದ ಆರೋಪ ಇದಾಗಿದೆ ಎಂದು ಬ್ರಿಟನ್ನ ಅಧಿಕಾರಿಗಳು ಹೇಳಿದ್ದಾರೆ. 

Similar News