×
Ad

ಬಗ್ದಾದ್ ವಿಮಾನ ನಿಲ್ದಾಣದಲ್ಲಿ ಮತ್ತೆ ಬೆಂಕಿ ದುರಂತ

Update: 2022-11-17 23:28 IST

ಬಗ್ದಾದ್, ನ.17: ಇರಾಕ್ನ ರಾಜಧಾನಿ ಬಗ್ದಾದ್ ವಿಮಾನ ನಿಲ್ದಾಣದ ಒಂದು ಟರ್ಮಿನಲ್ನಲ್ಲಿ ಗುರುವಾರ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಕಳೆದ 3 ದಿನದಲ್ಲಿ ಇದು 2ನೇ ಬೆಂಕಿ ದುರಂತವಾಗಿದೆ. ಬೆಂಕಿಯಿಂದ ಜೀವಹಾನಿ ಸಂಭವಿಸಿದ ವರದಿಯಿಲ್ಲ, ಆದರೆ ಎರಡು ಮಹಡಿಗಳ ಕಟ್ಟಡದಲ್ಲಿರುವ ಹಲವು ಏರ್ಲೈನ್ಸ್ ಕಚೇರಿಗಳಿಗೆ ಹಾನಿಯಾಗಿದೆ. ತಕ್ಷಣ ನಾಗರಿಕ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದೆ ಎಂದು ಇರಾಕ್ ಪ್ರಧಾನಿಯ ಕಚೇರಿ ಟ್ವೀಟ್ ಮಾಡಿದೆ.

Similar News