720 ಡಿಗ್ರಿ ಸೆಲ್ಶಿಯಸ್ ಉಷ್ಣತೆಯ ಕೊಳವೆಗೆ ಬಿದ್ದ ವ್ಯಕ್ತಿ ಪವಾಡಸದೃಶ ಪಾರು

Update: 2022-11-18 18:01 GMT

ಬರ್ನ್, ನ.18: ಸ್ವಿಝರ್ಲ್ಯಾಂಡಿನ ಫ್ಯಾಕ್ಟರಿಯೊಂದರಲ್ಲಿ  ಕರಗಿದ ಅಲ್ಯುಮೀನಿಯಂ ತುಂಬಿದ, 720 ಡಿಗ್ರಿ ಉಷ್ಣತೆಯಿದ್ದ ಕೊಳವೆಗೆ ಬಿದ್ದ ವ್ಯಕ್ತಿ ಪವಾಡ ಸದೃಶವಾಗಿ ಬದುಕಿ ಬಂದಿರುವುದಾಗಿ ವರದಿಯಾಗಿದೆ.

ಫ್ಯಾಕ್ಟರಿಯ ಕುಲುಮೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದ 25 ವರ್ಷದ ವ್ಯಕ್ತಿ ಕೊಳವೆಯೊಳಗೆ ಬಿದ್ದಿದ್ದಾನೆ. ಕೊಳವೆಯಲ್ಲಿದ್ದ 720 ಡಿಗ್ರಿ ಸೆಲ್ಶಿಯಸ್ ಉಷ್ಣತೆಯ ಕರಗಿದ ಅಲ್ಯುಮೀನಿಯಂನಲ್ಲಿ ಆತ ಮೊಳಕಾಲಿನವರೆಗೆ ಹೂತು ಹೋದರೂ, ರಕ್ಷಣಾ ತಂಡದ ನೆರವಿನಿಂದ ಹೊರಗೆ ಎಳೆಯಲಾಗಿದೆ. ತೀವ್ರ ಸುಟ್ಟ ಗಾಯವಾಗಿರುವ ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Similar News