ಟರ್ಕಿ ಬಾಂಬ್ ಸ್ಫೋಟ ಪ್ರಕರಣ: 29 ಮಂದಿಯ ಗಡೀಪಾರಿಗೆ ಆದೇಶ

Update: 2022-11-18 18:05 GMT

ಅಂಕಾರ, ನ.18: ಟರ್ಕಿಯ ಇಸ್ತಾನ್ಬುಲ್ನಲ್ಲಿ 6 ಮಂದಿಯ ಸಾವಿಗೆ ಕಾರಣವಾದ ಬಾಂಬ್ಸ್ಫೋಟ ಪ್ರಕರಣದಲ್ಲಿ 17 ಆರೋಪಿಗಳನ್ನು ವಿಚಾರಣೆ ಕಾಯ್ದಿರಿಸಿ ಬಂಧನದಲ್ಲಿ ಇಡುವಂತೆ ಅಲ್ಲಿನ ನ್ಯಾಯಾಲಯ ಆದೇಶಿಸಿದ್ದು, ಮೂವರು ಆರೋಪಿಗಳನ್ನು ವಿಚಾರಣೆ ಕಾಯ್ದಿರಿಸಿ ಬಿಡುಗಡೆಗೊಳಿಸುವಂತೆ ಸೂಚಿಸಿದೆ.

ಸಿರಿಯಾದ ಮಹಿಳೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾಳೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದಿದ್ದ 29 ಜನರನ್ನು ಟರ್ಕಿಯಿಂದ ಗಡೀಪಾರು ಮಾಡುವಂತೆಯೂ ನ್ಯಾಯಾಲಯ ಸೂಚಿಸಿರುವುದಾಗಿ ವರದಿಯಾಗಿದೆ.

Similar News