ಇರಾಕ್: ತೈಲ ಟ್ಯಾಂಕರ್ ಸ್ಫೋಟ: ಕನಿಷ್ಟ 13 ಮಂದಿ ಮೃತ್ಯು

Update: 2022-11-18 18:11 GMT

ಬಗ್ದಾದ್, ನ.18: ಇರಾಕ್ನ ಉತ್ತರ ಪ್ರಾಂತದಲ್ಲಿ ಗುರುವಾರ ಸಂಭವಿಸಿದ ತೈಲ ಟ್ಯಾಂಕರ್ ಸ್ಫೋಟದಲ್ಲಿ ಕನಿಷ್ಟ 11 ಮಂದಿ ಮೃತಪಟ್ಟಿದ್ದು ಇತರ 13 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. 

ಸುಲೇಮಾನಿಯಾ ನಗರದಲ್ಲಿ  ದುರಂತ ಸಂಭವಿಸಿದ್ದು ಟ್ಯಾಂಕರ್ನಿಂದ ತೈಲ ಸೋರಿಕೆಯಾಗಿರುವುದು ಸ್ಫೋಟಕ್ಕೆ ಕಾರಣವಾಗಿದೆ. ಸ್ಫೋಟದ ತೀವ್ರತೆಗೆ ಸಮೀಪದಲ್ಲಿದ್ದ ಮನೆಯೊಂದು ಕುಸಿದಿದ್ದು ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದ ಹಲವರನ್ನು ರಕ್ಷಿಸಲಾಗಿದೆ. ಇನ್ನೂ 4 ಮಂದಿ ಸಿಲುಕಿಕೊಂಡಿದ್ದು  ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರದ ವಿಪತ್ತು ಪರಿಹಾರ ಘಟಕದ ಅಧಿಕಾರಿಗಳು ಹೇಳಿದ್ದಾರೆ. 

Similar News