×
Ad

ಚೀನಾ: ಕೋವಿಡ್‌ನಿಂದ ವ್ಯಕ್ತಿ ಸಾವು; ಬೀಜಿಂಗ್ ನಲ್ಲಿ ಕಠಿಣ ನಿರ್ಬಂಧ

Update: 2022-11-20 22:15 IST

ಬೀಜಿಂಗ್, ನ.20: ಆರು ತಿಂಗಳ ಬಳಿಕ ಚೀನಾದಲ್ಲಿ ಕೋವಿಡ್ ಸೋಂಕಿನಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ದೇಶದ ಹಲವೆಡೆ ಸೋಂಕು ಉಲ್ಬಣಿಸಿದೆ. ಬೀಜಿಂಗ್ನಲ್ಲಿ ಶಾಲೆಗಳನ್ನು ಆನ್ಲೈನ್ ಮೂಲಕ ನಡೆಸಲು ಆದೇಶಿಸಿದ್ದು  ಕಚೇರಿ, ಹೋಟೆಲ್ಗಳನ್ನು ಮುಚ್ಚುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಶನಿವಾರ ಚೀನಾದಲ್ಲಿ ಒಟ್ಟು 24,435 ಸೋಂಕಿನ ಪ್ರಕರಣ ದಾಖಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ(ಎನ್ಎಚ್ಸಿ) ಹೇಳಿದೆ. ರವಿವಾರ ಸಂಜೆಯ ವೇಳೆಗೆ ಬೀಜಿಂಗ್ನಲ್ಲಿ 516 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಕಠಿಣ ನಿರ್ಬಂಧ ಕ್ರಮ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಜನಸಂದಣಿ ಸೇರದಂತೆ ಕ್ರಮ ಕೈಗೊಳ್ಳಲಾಗುವುದು.  ಸೂಕ್ತ ಮತ್ತು  ವೈಜ್ಞಾನಿಕ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೀಜಿಂಗ್ ಮುನಿಸಿಪಾಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನ ಉಪ ನಿರ್ದೇಶಕ ಲಿಯು ಕ್ಸಿಯೊಫೆಂಗ್ ರವಿವಾರ ಹೇಳಿದ್ದಾರೆ. 

Similar News