×
Ad

ಅಮೆರಿಕ: ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ 5 ಮೃತ್ಯು; 18 ಮಂದಿಗೆ ಗಾಯ

Update: 2022-11-20 22:20 IST

ವಾಷಿಂಗ್ಟನ್, ನ.20: ಅಮೆರಿಕದಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿ ಪ್ರಕರಣದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು 18 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕೊಲರಾಡೊ ಸ್ಪ್ರಿಂಗ್ಸ್ ಪ್ರದೇಶದ ಎಲ್ಜಿಬಿಟಿಕ್ಯು(ದ್ವಿಲಿಂಗಿ, ತೃತೀಯ ಲಿಂಗಿ ಇತ್ಯಾದಿ) ನೈಟ್ಕ್ಲಬ್ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಗುಂಡಿನ ದಾಳಿಯಲ್ಲಿ ಈತನೂ ಗಾಯಗೊಂಡಿರುವುದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಲರಾಡೊ ಸ್ಪ್ರಿಂಗ್ಸ್ನ ಲೆಫ್ಟಿನೆಂಟ್ ಪಮೇಲಾ ಕ್ಯಾಸ್ಟ್ರೊ ಹೇಳಿದ್ದಾರೆ.

ಇದೊಂದು ದ್ವೇಷ ದಾಳಿಯ ಪ್ರಕರಣವಾಗಿದೆ. ನಮ್ಮ ಸಮುದಾಯದ (ಎಲ್ಜಿಬಿಟಿಕ್ಯು) ಮೇಲೆ ನಡೆದ ಅವಿವೇಕದ ದಾಳಿಯಿಂದ ಆಘಾತವಾಗಿದೆ ಎಂದು ಕ್ಲಬ್ನ ಆಡಳಿತ ಟ್ವೀಟ್ ಮಾಡಿದೆ

Similar News