ನೇಪಾಳ ಸಂಸತ್ ಗೆ ಚುನಾವಣೆ‌

Update: 2022-11-20 16:56 GMT

ಕಠ್ಮಂಡು, ನ.20: ನೇಪಾಳದಲ್ಲಿ  ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳ ನೂತನ ಸದಸ್ಯರ ಆಯ್ಕೆಗೆ  ರವಿವಾರ ಬಿಗಿ ಭದ್ರತೆಯ ಮಧ್ಯೆ ಮತದಾನ ನಡೆದಿದ್ದು ರಾತ್ರಿ 9 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ದಿಲೀಪ್ ಕುಮಾರ್ ಥಪಾಲಿಯಾ ಹೇಳಿದ್ದಾರೆ.

ಸಂಸತ್ನ 275 ಸದಸ್ಯರನ್ನು ಮತ್ತು 7 ಪ್ರಾಂತೀಯ ಅಸೆಂಬ್ಲಿ ಸದಸ್ಯರನ್ನು ಆಯ್ಕೆ ಮಾಡಲು 17.0 ದಶಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಪ್ರಥಮ ಹಂತದ ಫಲಿತಾಂಶ ಮುಂದಿನ 8 ದಿನದೊಳಗೆ ಪ್ರಕಟವಾಗಲಿದ್ದು ಡಿಸೆಂಬರ್ 8ರೊಳಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗಲಿದೆ ಎಂದವರು ಹೇಳಿದ್ದಾರೆ. ದೇಶದ 77 ಜಿಲ್ಲೆಗಳಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು ಮತ್ತು ಎಲ್ಲಾ ಬೂತ್ಗಳಲ್ಲೂ ಹೆಲಿಕಾಪ್ಟರ್ಗಳ ಮೂಲಕ ನಿಗಾ ವಹಿಸಲಾಗಿತ್ತು. ಅಂತರಾಷ್ಟ್ರೀಯ ಗಡಿಯನ್ನು 72 ಗಂಟೆ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.‌

Similar News