×
Ad

ಅಮೆರಿಕ: ಬಾಡಿಗೆ ಕಾರಿನಲ್ಲಿ ಬಂದು ಬ್ಯಾಂಕ್ ದರೋಡೆ‌

Update: 2022-11-21 22:27 IST

ವಾಷಿಂಗ್ಟನ್, ನ.21: ಅಮೆರಿಕದಲ್ಲಿ ಬಾಡಿಗೆಗೆ ಕಾರನ್ನು  ಪಡೆದು  ಬ್ಯಾಂಕನ್ನು ದರೋಡೆ ಮಾಡಿದ್ದ  ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ ಎಂದು ವರದಿಯಾಗಿದೆ.

ಮಿಚಿಗನ್ನ ಸೌತ್ಫೀಲ್ಡ್ ನಿವಾಸಿ ಜೇಸನ್ ಕ್ರಿಸ್ಮಸ್ (Jason Christmas)ಎಂಬಾತ ಉಬೆರ್ ಟ್ಯಾಕ್ಸಿಯನ್ನು ಬಾಡಿಗೆಗೆ ಬುಕ್ಮಾಡಿ ಹಂಟಿಗ್ಟನ್ ಬ್ಯಾಂಕ್ ನ ಕಚೇರಿಗೆ ತೆರಳಿದ್ದಾನೆ. ಬ್ಯಾಂಕ್ ನ ಹೊರಗೆ ಕಾಯುವಂತೆ ಟ್ಯಾಕ್ಸಿಯ ಡ್ರೈವರ್ಗೆ ತಿಳಿಸಿ, ಮುಖಕ್ಕೆ ಮಾಸ್ಕ್ ಧರಿಸಿ ಬ್ಯಾಂಕ್ ನ ಒಳಗೆ ಹೋಗಿದ್ದಾನೆ. ಅಲ್ಲಿ ಪಿಸ್ತೂಲ್ ಹಿಡಿದು ಸಿಬಂದಿಗಳನ್ನು ಬೆದರಿಸಿ ಹಣ ಕಿತ್ತುಕೊಂಡು ಹೊರಗಡೆಯಿದ್ದ ಕಾರಿನ ಮೂಲಕ ತನ್ನ ಮನೆಗೆ ತೆರಳಿದ್ದಾನೆ. ಟ್ಯಾಕ್ಸಿಯ ಡ್ರೈವರ್ ಗೆ  ಬ್ಯಾಂಕ್ ದರೋಡೆಯ ಮಾಹಿತಿಯೇ ಇರಲಿಲ್ಲ.

ದರೋಡೆಯ ಮಾಹಿತಿ ಪಡೆದ ಪೊಲೀಸರು ಬ್ಯಾಂಕಿನ ಹೊರಭಾಗದ ಸಿಸಿಟಿವಿ ಪರಿಶೀಲಿಸಿದಾಗ ಟ್ಯಾಕ್ಸಿಯ ನಂಬರ್ ಪತ್ತೆಯಾಗಿದೆ. ಬಳಿಕ ಟ್ಯಾಕ್ಸಿಯನ್ನು ಪತ್ತೆಹಚ್ಚಿದಾಗ ಡ್ರೈವರ್ ಪೊಲೀಸರನ್ನು ಜೇಸನ್ ನ ಮನೆಗೆ ಕರೆದೊಯ್ದಿದ್ದಾನೆ. ಮನೆಯಲ್ಲಿಯೇ ಇದ್ದ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‌

Similar News