ಇಸ್ರೇಲ್ ಸೇನೆಯ ಗುಂಡೇಟಿಗೆ ಪೆಲೆಸ್ತೀನ್ ವಿದ್ಯಾರ್ಥಿ ಮೃತ್ಯು

Update: 2022-11-21 17:49 GMT

ಜೆನಿನ್, ನ.21: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸೋಮವಾರ ಇಸ್ರೇಲ್ (Israel)ಸೇನೆ ನಡೆಸಿದ ಬಂಧನ ಕಾರ್ಯಾಚರಣೆ ಸಂದರ್ಭ ಹಾರಿಸಿದ ಗುಂಡೇಟಿನಿಂದ  ಪೆಲೆಸ್ತೀನ್ ಹೈಸ್ಕೂಲ್ (Palestine High School)ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಜೆನಿನ್‍ನಲ್ಲಿ ಸೇನೆಯು ಬಂದೂಕು ಹೊಂಚುದಾಳಿಯ ಶಂಕಿತ ವ್ಯಕ್ತಿಯನ್ನು ಬಂಧಿಸಿದಾಗ ಪೆಲೆಸ್ತೀನಿಯರು ಸೇನೆಯತ್ತ ಗುಂಡಿನ ದಾಳಿಯ ಜತೆಗೆ ಸ್ಫೋಟಕವನ್ನು ಎಸೆದರು. ಪ್ರತಿಯಾಗಿ ಸೇನೆ ಹಾರಿಸಿದ ಗುಂಡು ಕನಿಷ್ಟ ಒಬ್ಬ  ವ್ಯಕ್ತಿಗೆ ತಗುಲಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಶಂಕಿತ ವ್ಯಕ್ತಿಯನ್ನು ಬಂಧಿಸುವ ಮುನ್ನ   ಇಸ್ರೇಲ್ ಸೇನೆ ಮನೆಯನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದರಿಂದ ಆತ ಶರಣಾಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಗುಂಡೇಟಿನಿಂದ ಮೃತಪಟ್ಟವ ಹೈಸ್ಕೂಲ್ ವಿದ್ಯಾರ್ಥಿ ಎಂದು ಸೇನೆಯ ವೈದ್ಯಕೀಯ ಘಟಕ ದೃಢಪಡಿಸಿದೆ. ವಿದ್ಯಾರ್ಥಿ ಆ ದಾರಿಯಾಗಿ ಶಾಲೆಗೆ ಹೋಗುತ್ತಿದ್ದ ಎಂದು ಪೆಲೆಸ್ತೀನ್‍ನ ಶಿಕ್ಷಣ ಇಲಾಖೆ ಹೇಳಿದೆ. 

Similar News