ದುಬೈನಲ್ಲಿ ನಿರ್ಮಾಣವಾಗಲಿದೆ ವಜ್ರಾಕಾರದ ವಿಶ್ವದ ಅತಿ ಎತ್ತರದ ವಸತಿ ಕಟ್ಟಡ

Update: 2022-11-23 11:38 GMT

ದುಬೈ: ದುಬೈನಲ್ಲಿ (Dubai) ನಿರ್ಮಾಣವಾಗಲಿರುವ ಹೊಸ ಗಗನಚುಂಬಿ ಕಟ್ಟಡವೊಂದು ವಿಶ್ವದ ಅತಿ ಎತ್ತರದ ವಸತಿ ಕಟ್ಟಡವಾಗಿ ಹೊರಹೊಮ್ಮಲಿದೆ. Burj Binghatti Jacob & Co Residences ಎಂದು ಕರೆಯಲ್ಪಡುವ ಈ ಕಟ್ಟಡವನ್ನು  Binghatti ಮತ್ತು Jacob & Co ಕಂಪೆನಿಗಳ ಜಂಟಿ ಸಹಯೋಗದಲ್ಲಿ ರಚನೆಯಾಗಲಿದೆ. 

ನೂತನವಾಗಿ ನಿರ್ಮಾಣವಾಗಲಿರುವ ಕಟ್ಟಡದ ವಿನ್ಯಾಸವನ್ನು ಎರಡೂ ಕಂಪನಿಗಳು ಮಂಗಳವಾರ ಅನಾವರಣಗೊಳಿಸಿದೆ. “ವಿಶ್ವದ ಅತಿ ಎತ್ತರದ ವಸತಿ ನಿರ್ಮಾಣಗಳಲ್ಲಿ ಒಂದಾಗಿ ದಾಖಲೆಯನ್ನು ಸ್ಥಾಪಿಸುವುದು" ಎಂದು ವಾಚ್‌ಮೇಕರ್ ಜಾಕೋಬ್ & ಕಂ ಮತ್ತು ಎಮಿರಾಟಿ ಅಭಿವೃದ್ಧಿ ಸಂಸ್ಥೆ ಬಿಂಗಟ್ಟಿ ಹೇಳಿಕೊಂಡಿದೆ. 

ʼಹೈಪರ್‌ ಟವರ್‌ʼ ಹೆಸರಿನ ಈ ಕಟ್ಟಡವು 100 ಮಹಡಿಗಳನ್ನು ಹೊಂದಿರಲಿದ್ದು, ಇದು ಪ್ರಸ್ತುತ ಅತೀ ಎತ್ತರದ ವಸತಿ ಕಟ್ಟಡವೆಂಬ ಹೆಗ್ಗಳಿಕೆ ಹೊಂದಿರುವ ಸೆಂಟ್ರಲ್ ಪಾರ್ಕ್ ಟವರ್‌ಗಿಂತ ಎರಡು ಪಟ್ಟು ಹೆಚ್ಚು ಎತ್ತರಕ್ಕಿರಲಿದೆ ಎಂದು ನ್ಯೂಯಾರ್ಕ್ ಪೋಸ್ಟ್‌ನ ವರದಿ ಹೇಳಿದೆ. ಕಟ್ಟಡದ ಶಿಖರವು ವಜ್ರದ ಆಕಾರವನ್ನು ಹೊಂದಿರಲಿದೆ.

ಈ ಕಟ್ಟಡವು ದುಬೈನ ಆರ್ಥಿಕ ಕೇಂದ್ರವಾದ ಬ್ಯುಸಿನೆಸ್ ಬೇ ಹೃದಯಭಾಗದಲ್ಲಿ ನಿರ್ಮಾಣವಾಗಲಿದೆ. ಮೇಲಿನ ಮಹಡಿಯಲ್ಲಿ ಐದು "ಅತ್ಯಂತ ಐಷಾರಾಮಿ ಮತ್ತು ವಿಶೇಷ" ನಿವಾಸಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಇದನ್ನೂ ಓದಿ: ಇದುವರೆಗೂ ಒಂದು ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ: ಗೃಹ ಸಚಿವರ ವಿರುದ್ಧ BJP ಶಾಸಕ ಅಸಮಾಧಾನ

Similar News