ಫಿಫಾ ವಿಶ್ವಕಪ್: ಖತರ್ ವಿರುದ್ಧ ಸೆನೆಗಲ್‌ಗೆ 3-1 ಜಯ

Update: 2022-11-25 15:05 GMT

ದೋಹಾ, ನ.25: ಫಿಫಾ ವಿಶ್ವಕಪ್‌ನ ಗ್ರೂಪ್ 'ಎ' ಪಂದ್ಯದಲ್ಲಿ ಸೆನೆಗಲ್ ತಂಡ ಆತಿಥೇಯ ಖತರ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ.

ಶುಕ್ರವಾರ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೆನೆಗಲ್ ತಂಡವು 41ನೇ, 48ನೇ ಹಾಗೂ 84ನೇ ನಿಮಿಷದಲ್ಲಿ ಗೋಲು ಗಳಿಸಿತು.

ಖತರ್ 78ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿತು.
 

Similar News