×
Ad

ಮೆಟಾ ಸಂಸ್ಥೆಯನ್ನು 'ಉಗ್ರಗಾಮಿ'ಗಳ ಪಟ್ಟಿಗೆ ಸೇರ್ಪಡೆ ಮಾಡಿದ ರಶ್ಯ

Update: 2022-11-25 22:40 IST

ಮಾಸ್ಕೊ, ನ.25: ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್ ಬುಕ್ (Facebook)ನ ಮಾತೃಸಂಸ್ಥೆ `ಮೆಟಾ'(``meta'')ವನ್ನು ಉಗ್ರಗಾಮಿಗಳ ಪಟ್ಟಿಗೆ ಸೇರಿಸಿರುವುದಾಗಿ ರಶ್ಯದ ನ್ಯಾಯ ಇಲಾಖೆಯ ಆದೇಶವನ್ನು ಉಲ್ಲೇಖಿಸಿ `ಕೊಮರ್ಸ್ಯಾಂಟ್' (``Commersant'')ಪತ್ರಿಕೆ ಶುಕ್ರವಾರ ವರದಿ ಮಾಡಿದೆ.

ಮೆಟಾ `ಉಗ್ರ ಚಟುವಟಿಕೆಯಲ್ಲಿ ತೊಡಗಿದೆ' ('Engaged in radical activity')ಎಂದು ಈ ವರ್ಷದ ಆರಂಭದಲ್ಲಿ ರಶ್ಯದ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಪಾಶ್ಚಾತ್ಯ ಸಾಮಾಜಿಕ ವೇದಿಕೆಯ ವಿರುದ್ಧದ ಅಭಿಯಾನದ ಅಂಗವಾಗಿ ರಶ್ಯಾವು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಕೆಯನ್ನು ನಿರ್ಬಂಧಿಸಿದೆ.

ಯುದ್ಧದಲ್ಲಿ ರಶ್ಯಕ್ಕೆ ಹಿನ್ನಡೆಯಾಗಿಲ್ಲ : ಪುಟಿನ್

 ಉಕ್ರೇನ್ ನಲ್ಲಿ ರಶ್ಯ ಪಡೆಗೆ ಹಿನ್ನಡೆಯಾಗಿದೆ ಎಂಬುದು ಪಾಶ್ಚಿಮಾತ್ಯ ಮಾಧ್ಯಮಗಳು ಸೃಷ್ಟಿಸಿದ ಸುಳ್ಳು ಸುದ್ಧಿ. ಅದನ್ನು ನಂಬಬಾರದು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಶುಕ್ರವಾರ ಹೇಳಿದ್ದಾರೆ.

ಉಕ್ರೇನ್ ಯುದ್ಧದಲ್ಲಿ ಪಾಲ್ಗೊಂಡಿರುವ  ರಶ್ಯದ ಯೋಧರ ತಾಯಂದಿರ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಪುಟಿನ್ `ಇಂಟರ್ನೆಟ್ ನಲ್ಲಿ ಬರುವ ಸುದ್ಧಿಯೆಲ್ಲವನ್ನೂ ನಂಬಬೇಡಿ. ಅಲ್ಲಿ ಹಲವು ಸುಳ್ಳು ಸುದ್ಧಿಗಳಿರುತ್ತವೆ. ನಮ್ಮ ಟಿವಿ ಅಥವಾ ಇಂಟರ್ನೆಟ್ ನಲ್ಲಿ ತೋರಿಸುವುದಕ್ಕಿಂತಲೂ ಜೀವನವು ಹೆಚ್ಚು ಸಂಕೀರ್ಣವಾಗಿದೆ' ಎಂದರು. ಪುತ್ರರನ್ನು ಕಳೆದುಕೊಂಡ ತಾಯಂದಿರ ನೋವು ತನಗೆ ಅರ್ಥವಾಗುತ್ತದೆ.  ತಾನಷ್ಟೇ ಅಲ್ಲ, ಇಡೀ ದೇಶದ ಆಡಳಿತ ಈ ನೋವನ್ನು ಹಂಚಿಕೊಳ್ಳಲಿದೆ ಎಂದು ಪುಟಿನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Similar News