ಫಿಫಾ ವಿಶ್ವಕಪ್ 2022: ಅಂಕಿ-ಅಂಶದತ್ತ ಒಂದು ನೋಟ

Update: 2022-11-26 13:53 GMT

ದೋಹಾ: FIFA ವಿಶ್ವಕಪ್ 2022 ರ ಮೊದಲ ವಾರದಲ್ಲಿ ಸ್ಟಾರ್ ಆಟಗಾರರಾದ ಲಿಯೊನೆಲ್ ಮೆಸ್ಸಿ ಹಾಗೂ  ಕ್ರಿಸ್ಟಿಯಾನೊ ರೊನಾಲ್ಡೊ ಇಬ್ಬರೂ ಗೋಲು ಗಳಿಸಿದ್ದಾರೆ, ಜೊತೆಗೆ ಅರ್ಜೆಂಟೀನ ಹಾಗೂ  ಜರ್ಮನಿ ತಂಡಗಳು ತಮ್ಮ ಆರಂಭಿಕ ಗ್ರೂಪ್ ಪಂದ್ಯಗಳನ್ನು ಕಳೆದುಕೊಂಡು ಆಘಾತ ಅನುಭವಿಸಿದವು. ಸ್ಪೇನ್‌ ತಂಡ ಏಳು ಗೋಲುಗಳ ಅಂತರದಿಂದ ಬೃಹತ್ ಜಯ ದಾಖಲಿಸಿತು.

ವಿಶ್ವಕಪ್ ನ ಮೊದಲ  ಸುತ್ತಿನ  ಅಂಕಿ-ಅಂಶಗಳು ಇಂತಿವೆ…

3 - ಜರ್ಮನಿಯು ಈಗ ಸತತ ಮೂರು ಪ್ರಮುಖ ಪಂದ್ಯಾವಳಿಗಳಲ್ಲಿ ತನ್ನ ಆರಂಭಿಕ ಪಂದ್ಯವನ್ನು ಕಳೆದುಕೊಂಡಿದೆ .  2022ರ ವಿಶ್ವಕಪ್ ನಲ್ಲಿ ಜಪಾನ್‌ ವಿರುದ್ಧ 1-2; ಯುರೋ 2020 ನಲ್ಲಿ ಫ್ರಾನ್ಸ್‌ ವಿರುದ್ಧ  0-1 ಹಾಗೂ  2018 ರ ವಿಶ್ವಕಪ್ ನಲ್ಲಿ ಮೆಕ್ಸಿಕೋಗೆ 0-1 ಅಂತರದಿಂದ ಶರಣಾಗಿದೆ,. 1978ರಲ್ಲಿ ಆಸ್ಟ್ರಿಯಾ ವಿರುದ್ಧ ಪಂದ್ಯದ  ನಂತರ ವಿಶ್ವಕಪ್‌ನಲ್ಲಿ ಮೊದಲಾರ್ಧದಲ್ಲಿ  ಮುನ್ನಡೆ ಸಾಧಿಸಿದ  ಬಳಿಕ ಜರ್ಮನಿ ಸೋಲು ಕಂಡಿದೆ.

7 - ಸ್ಪೇನ್‌ ತಂಡ  ಕೋಸ್ಟರಿಕ ವಿರುದ್ಧ 7-0 ಅಂತರದಿಂದ ಜಯ ಸಾಧಿಸಿದ್ದು, ಇದು ವಿಶ್ವಕಪ್ ಪಂದ್ಯವೊಂದರಲ್ಲಿ ಸ್ಪೇನ್ ನ  ದೊಡ್ಡ ಅಂತರದ ಗೆಲುವಾಗಿದೆ.

18 - 18 ವರ್ಷ  ಹಾಗೂ  110 ದಿನಗಳಲ್ಲಿ ಗಾವಿ  ಅವರು ಬ್ರೆಝಿಲ್ ದಂತಕತೆ  ಪೀಲೆ ನಂತರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು. ಪೀಲೆ 1958 ರ ವಿಶ್ವಕಪ್  ನಲ್ಲಿ ತನ್ನ 17ನೇ ವಯಸ್ಸಿನಲ್ಲಿ ವಿಶ್ವಕಪ್ ನಲ್ಲಿ ಗೋಲು ಗಳಿಸಿದ್ದರು. ಗಾವಿ  ಸ್ಪೇನ್‌ಗಾಗಿ ಗೋಲು ಗಳಿಸಿದ ಮೊದಲ ಹದಿಹರೆಯದ ಆಟಗಾರನಾಗಿದ್ದಾರೆ.

6 - ಕೋಸ್ಟರಿಕದ  ವಿರುದ್ಧ 7 ಗೋಲುಗಳನ್ನು ಗಳಿಸುವ ಮೂಲಕ ಸ್ಪೇನ್ ವಿಶ್ವಕಪ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದ ಆರನೇ ರಾಷ್ಟ್ರ ಎನಿಸಿಕೊಂಡಿತು. ಬ್ರೆಝಿಲ್ (231 ಗೋಲು) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

4 - ಬೆಲ್ಜಿಯಂ ವಿರುದ್ಧದ 0-1 ಸೋಲಿನ ನಂತರ, ಕೆನಡ ತಂಡ ಆಡಿದ ಎಲ್ಲಾ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿ ಸ್ಕೋರ್‌ ಗಳಿಸದೆ ಉಳಿದಿದೆ.

37 - 37 ವರ್ಷ ವಯಸ್ಸಿನ ರೊನಾಲ್ಡೊ ಈಗ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ಪರ  ಗೋಲು ಗಳಿಸಿದ ಅತ್ಯಂತ ಹಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾರೆ. 2006 ರ ತನ್ನ ಚೊಚ್ಚಲ ವಿಶ್ವಕಪ್‌ನಲ್ಲಿ 21 ವರ್ಷ ಮತ್ತು 132 ದಿನಗಳಲ್ಲಿ ಗೋಲು ಗಳಿಸಿದ್ದ ರೊನಾಲ್ಡೊ ಅವರು ಗೋಲು ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ  ಆಟಗಾರರಾಗಿದ್ದರು.

27: ಇಪ್ಪತ್ತೇಳು  ಆಟಗಾರರು ಮೊದಲ ಬಾರಿ ಗೋಲು ಗಳಿಸಿದ್ದಾರೆ. ಕೆಳ ರ್ಯಾಂಕಿನ ಎರಡು ತಂಡಗಳು ಪಂದ್ಯವನ್ನು ಜಯಿಸಿವೆ.

04: ನಾಲ್ಕು ಪಂದ್ಯಗಳು ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿವೆ.

Similar News