×
Ad

ಬ್ರೆಝಿಲ್ ನ 2 ಶಾಲೆಗಳಲ್ಲಿ ಗುಂಡಿನ ದಾಳಿ: 3 ಮಂದಿ ಮೃತ್ಯು; 11 ಮಂದಿಗೆ ಗಾಯ

Update: 2022-11-26 21:45 IST

ಬ್ರಸಿಲಾ, ನ.26: ಆಗ್ನೇಯ ಬ್ರೆಝಿಲ್ (Southeast Brazil)ನ  ಎರಡು ಶಾಲೆಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ಕನಿಷ್ಟ 3 ಮಂದಿ ಮೃತಪಟ್ಟಿದ್ದು ಇತರ 11 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಅರಾಕ್ರೂಸ್ (Aracruz)ನಗರದಲ್ಲಿನ  ಶಾಲೆಯೊಂದಕ್ಕೆ ಶುಕ್ರವಾರ ಆಗಮಿಸಿದ  ವ್ಯಕ್ತಿಯೊಬ್ಬ ಅಲ್ಲಿದ್ದ ಶಿಕ್ಷಕರತ್ತ ಗುಂಡು ಹಾರಿಸಿದಾಗ ಇಬ್ಬರು ಮಹಿಳೆಯರು ಮೃತಪಟ್ಟಿದ್ದು 9 ಮಂದಿ ಗಾಯಗೊಂಡಿದ್ದಾರೆ. ಬಳಿಕ ಸಮೀಪದ ಮತ್ತೊಂದು ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದಾಗ ಯುವತಿಯೊಬ್ಬಳು  ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ನಗರದ ಮೇಯರ್ ಲೂಯಿಸ್ ಕಾರ್ಲೋಸ್ (Luis Carlos) ಕುತಿನ್ಹೊರನ್ನು ಉಲ್ಲೇಖಿಸಿ ಸಿಬಿಎನ್ ವರದಿ ಮಾಡಿದೆ.

ವ್ಯಾಪಕ ಕಾರ್ಯಾಚರಣೆಯ ಬಳಿಕ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು ಆತ ಯಾವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.  

Similar News