ಮೂವರು ಕ್ರಿಮಿನಲ್ ಗಳು ಹೊಂಚು ಹಾಕುತ್ತಿದ್ದಾರೆ : ಇಮ್ರಾನ್ ಖಾನ್

Update: 2022-11-26 17:14 GMT

ರಾವಲ್ಪಿಂಡಿ, ನ.26: ಹತ್ಯಾಯತ್ನದಿಂದ ಪಾರಾದ ಬಳಿಕ ಪ್ರಥಮ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) , ಮೂವರು ಕ್ರಿಮಿನಲ್ಗಳು ತನ್ನ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ತನ್ನ ಹತ್ಯೆಗೆ ನಡೆದ ಯತ್ನದ ಹಿಂದೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್(Shahbaz Sharif), ಆಂತರಿಕ ಸಚಿವ ರಾಣಾ ಸನಾವುಲ್ಲಾ ಹಾಗೂ ಐಎಸ್ಐನ ಡಿಜಿ ಮೇಜರ್ ಜನರಲ್ ಫೈಸಲ್ ನಸೀರ್(Naseer) ಅವರ ಕೈವಾಡವಿದೆ ಎಂದು ಇಮ್ರಾನ್ ಖಾನ್ ಹಲವು ಬಾರಿ ಆರೋಪಿಸಿದ್ದಾರೆ.

ಸಾವಿನ ಭಯ ಬಿಟ್ಟರೆ ಮುಕ್ತವಾಗಿ ಬದುಕಲು ಸಾಧ್ಯ. ನೀವು ಬದುಕಲು ಬಯಸುವುದಾದರೆ ಸಾವಿನ  ಭಯದಿಂದ ದೂರ ಇರಬೇಕು ಎಂದು ಕರೆ ನೀಡಿದ ಇಮ್ರಾನ್, ಕಾಲಿಗೆ ಗಾಯವಾದ್ದರಿಂದ ವಿಶ್ರಾಂತಿ ಪಡೆಯುವಂತೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಎಲ್ಲರೂ ಸಲಹೆ ನೀಡಿದ್ದರು. ಆದರೆ   ಸಾವನ್ನು ಅತ್ಯಂತ ಹತ್ತಿರದಿಂದ ನೋಡಿದ್ದರಿಂದ  ಮುಂದೆ ಸಾಗಲು ನಿರ್ಧರಿಸಿದ್ದೇನೆ ಎಂದರು. 

ರಾವಲ್ಪಿಂಡಿಯಲ್ಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಮ್ರಾನ್ ಖಾನ್ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದು ಅವರೊಂದಿಗೆ ವೈದ್ಯರ ತಂಡವೂ ಆಗಮಿಸಿದೆ.   

Similar News