ಫಿಫಾ ವಿಶ್ವಕಪ್ : ಬೆಲ್ಜಿಯಮ್ ತರಬೇತುದಾರ ಹುದ್ದೆ ತೊರೆದ ರಾಬರ್ಟೊ ಮಾರ್ಟಿನೆಝ್

Update: 2022-12-02 07:17 GMT

ದೋಹಾ: ಖತರ್‌ನಲ್ಲಿ ಗುರುವಾರ ನಡೆದ ತನ್ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಕ್ರೊಯೇಶಿಯಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ನಂತರ ವಿಶ್ವಕಪ್ ನಿಂದ ನಿರ್ಗಮಿಸಿರುವ ಬೆಲ್ಜಿಯಂ ತಂಡದ ಕೋಚ್ ರಾಬರ್ಟೊ ಮಾರ್ಟಿನೆಝ್ Belgium coach Roberto Martinez  ಅವರು ತಮ್ಮ ಹುದ್ದೆ ತ್ಯಜಿಸುವುದಾಗಿ ಹೇಳಿದ್ದಾರೆ.

49 ವರ್ಷ ವಯಸ್ಸಿನವರಾದ ಮಾರ್ಟಿನೆಝ್ ಅವರು  2016 ರಿಂದ ಕೋಚ್ ಹುದ್ದೆ ವಹಿಸಿದ್ದರು. ಪಂದ್ಯಾವಳಿಯ ನಂತರ ಅವರ ಒಪ್ಪಂದದ ಅವಧಿವು ಮುಕ್ತಾಯಗೊಳ್ಳಲಿದೆ.

"ಕ್ರೊಯೇಶಿಯ ವಿರುದ್ಧ ಪಂದ್ಯವು  ರಾಷ್ಟ್ರೀಯ ತಂಡದೊಂದಿಗೆ ನನ್ನ ಕೊನೆಯ ಪಂದ್ಯ, ನಾನು ಈ ಹುದ್ದೆಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಇದು ಕೊನೆಯ ಪಂದ್ಯ  ಎಂದು ಒಪ್ಪಿಕೊಳ್ಳುವ ಸಮಯ ಬಂದಿದೆ'' ಎಂದು ಮಾರ್ಟಿನೆಝ್ ತಮ್ಮ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

ಮಾರ್ಟಿನೆಝ್ ಮಾರ್ಗದರ್ಶನದಲ್ಲಿ  ಬೆಲ್ಜಿಯಮ್  ರಷ್ಯಾದಲ್ಲಿ ನಡೆದ 2018 ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನಕ್ಕೆ ತಲುಪಿತ್ತು ಹಾಗೂ ಕಳೆದ ವರ್ಷ ಯುರೋ 2020 ಕ್ವಾರ್ಟರ್-ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಆದರೆ ವಿಶ್ವದ ನಂ.2ನೇ  ತಂಡ ಬೆಲ್ಜಿಯಮ್ ಖತರ್ ನಲ್ಲಿ ತನ್ನ ಉತ್ತಮ ಫಾರ್ಮ್ ಅನ್ನು ಪುನರಾವರ್ತಿಸಲು ವಿಫಲವಾಗಿದೆ, ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೋಲು ಗಳಿಸಿದ ನಂತರ ಟೂರ್ನಿಯಿಂದ ಹೊರಬಿದ್ದಿದೆ

Similar News