ಫಿಲಿಪ್ಪೀನ್ಸ್ ಜೈಲಿನಲ್ಲಿ ಕೈದಿಗಳ ಸಾಮೂಹಿಕ ಅಂತ್ಯಕ್ರಿಯೆ

Update: 2022-12-02 17:00 GMT

ಮನಿಲಾ, ಡಿ.2: ಫಿಲಿಪ್ಪೀನ್ಸ್(Philippines) ನ ಅತೀ ದೊಡ್ಡ ಜೈಲಿನಲ್ಲಿ ಸಹಜ ಕಾರಣದಿಂದ ಮೃತಪಟ್ಟಿದ್ದ 70 ಕೈದಿಗಳ ಸಾಮೂಹಿಕ ಅಂತ್ಯಕ್ರಿಯೆ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.

ಫಿಲಿಪ್ಪೀನ್ಸ್ ಕಾನೂನಿನ ಪ್ರಕಾರ, ಜೈಲಿನಲ್ಲಿ ಮೃತಪಟ್ಟ ಕೈದಿಗಳ ಮೃತದೇಹಗಳನ್ನು ಕುಟುಂಬದವರಿಗೆ ಅಥವಾ ಬಂಧುಗಳಿಗೆ ಹಸ್ತಾಂತರಿಸಲು 3 ತಿಂಗಳವರೆಗೆ  ಚಿತಾಗಾರದ ಕೋಣೆಯಲ್ಲಿ ಇಡಲಾಗುತ್ತದೆ. ಈ ಅವಧಿಯಲ್ಲಿ ಯಾರೂ ಬರದಿದ್ದರೆ ಅಧಿಕಾರಿಗಳು ಸಾಮೂಹಿಕ ಅಂತ್ಯಸಂಸ್ಕಾರ ನಡೆಸುತ್ತಾರೆ. ಮೃತರ ಕುಟುಂಬದವರು ಬಡವರಾದರೆ ಅಂತ್ಯಸಂಸ್ಕಾರದ ವೆಚ್ಚ ನಿಭಾಯಿಸಲು ಕಷ್ಟವಾಗುವ ಕಾರಣದಿಂದ ಹಿಂಜರಿಯುತ್ತಾರೆ ಎಂದು ಮೂಲಗಳು ಹೇಳಿವೆ. 

Similar News