ಪೆಲೆಸ್ತೀನ್ ಕುರಿತ ವಿಶ್ವಸಂಸ್ಥೆ ನಿರ್ಣಯಕ್ಕೆ ಒಐಸಿ ಸ್ವಾಗತ

Update: 2022-12-02 17:02 GMT

ಜೆದ್ದಾ, ಡಿ.2: ವಿಶ್ವಸಂಸ್ಥೆ(WHO)ಯ ಸಾಮಾನ್ಯ ಸಭೆಯು ಪೆಲೆಸ್ತೀನ್ ಹಾಗೂ ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ 5 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿರುವುದನ್ನು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸ್ವಾಗತಿಸಿದೆ.

ಆಕ್ರಮಿತ ಪೆಲೆಸ್ತೀನ್ ಪ್ರದೇಶದಲ್ಲಿ ಜನಸಂಖ್ಯಾ ಸಂಯೋಜನೆ, ಸ್ವರೂಪ ಮತ್ತು ಸ್ಥಿತಿಯನ್ನು ಬದಲಾಯಿಸುವ ಉದ್ದೇಶದ ಎಲ್ಲಾ ಕ್ರಮಗಳನ್ನು ನಿಲ್ಲಿಸಲು ಕರೆ ನೀಡುವ ನಿರ್ಣಯವೂ ಇದರಲ್ಲಿ ಸೇರಿದೆ. `ಪೆಲೆಸ್ತೀನಿ ಜನರ ಅನಿಯಂತ್ರಿತ ಹಕ್ಕುಗಳು, ವಿಶ್ವಸಂಸ್ಥೆಯ ಸಚಿವಾಲಯದಲ್ಲಿ ಪೆಲೆಸ್ತೀನಿಯನ್ ಹಕ್ಕುಗಳ ವಿಭಾಗ , ಪೆಲೆಸ್ತೀನ್ ಸಮಸ್ಯೆಗೆ ಶಾಂತಿಯುತ ಪರಿಹಾರಕ್ಕೆ ಮೂಲ ತತ್ವಗಳು' ಸೇರಿದಂತೆ  5 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇಸ್ರೇಲ್ನ ಅಸಾಧಾರಣಾವಾದವು(ರೂಢಿಗಿಂತ ಭಿನ್ನವಾಗಿರುವ ಸ್ಥಿತಿ) ಇಸ್ರೇಲ್ನ ಕೆಟ್ಟ ಪ್ರವೃತ್ತಿಯನ್ನು ಮಾತ್ರ ಉತ್ತೇಜಿಸಿರುವುದನ್ನು ವಿಶ್ವಸಂಸ್ಥೆ ಗಮನಿಸಿದೆ  ಎಂದು ಪೆಲೆಸ್ತೀನ್ ದೇಶದ ಕಾಯಂ ವೀಕ್ಷಕರು ಹೇಳಿದ್ದಾರೆ.

ಈ ಮಹತ್ವದ ನಿರ್ಣಯಗಳನ್ನು ಪ್ರಾಯೋಜಿಸಲು ಮತ್ತು ಬೆಂಬಲಿಸಲು ಕೊಡುಗೆ ನೀಡಿದ ದೇಶಗಳು ಅಂತರಾಷ್ಟ್ರೀಯ ನಿಯಮಕ್ಕೆ ತಮ್ಮ ಬದ್ಧತೆಯನ್ನು ದೃಢಪಡಿಸಿವೆ ಎಂದು ಒಐಸಿ ಶ್ಲಾಘಿಸಿದೆ.  

Similar News