ಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

Update: 2022-12-03 10:17 GMT

ಸ್ಯಾನ್ ಫ್ರಾನ್ಸಿಸ್ಕೊ: ಭಾರತದ ಮೂರನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು (Padma Bhushan) ವ್ಯಾಪಾರ ಮತ್ತು ಉದ್ಯಮ ವಿಭಾಗದಲ್ಲಿನ ಸಾಧನೆಗಾಗಿ ಗೂಗಲ್ ಹಾಗೂ ಆಲ್ಫಾಬೆಟ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈಗೆ (Sundar Pichai) ಅಮೆರಿಕಾದಲ್ಲಿನ ಭಾರತದ ರಾಯಭಾರಿ ತರಂಜೀತ್ ಸಿಂಗ್ ಸಂಧು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸುಂದರ್ ಪಿಚ್ಚೈ ಕುಟುಂಬದ ಸದಸ್ಯರು ಹಾಜರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಂದರ್ ಪಿಚೈ, “ಜಾಗತಿಕ ಅನ್ವೇಷಣೆಗೆ ಭಾರತದ ಪ್ರತಿಭೆಗಳು ನೀಡಿರುವ ಕೊಡುಗೆಯನ್ನು ಈ ಸ್ಫೂರ್ತಿದಾಯಕ ಪಯಣ ಮತ್ತೊಮ್ಮೆ ದೃಢೀಕರಿಸಿದೆ” ಎಂದು ಹೇಳಿದ್ದಾರೆ.

“ಸ್ಯಾನ್ ಫ್ಯಾನ್ಸಿಸ್ಕೊದಲ್ಲಿ ಗೂಗಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿ ರೋಮಾಂಚಿತನಾಗಿದ್ದೇನೆ. ಮಧುರೈನಿಂದ ಮೌಂಟೇನ್ ವ್ಯೂವರೆಗಿನ ಅವರ ಸ್ಫೂರ್ತಿದಾಯಕ ಪಯಣ ಭಾರತ-ಅಮೆರಿಕಾ ನಡುವಿನ ಆರ್ಥಿಕ ಮತ್ತು ತಾಂತ್ರಿಕ ಸಂಬಂಧಗಳನ್ನು ಬಲಪಡಿಸಿದ್ದು, ಇದು ಜಾಗತಿಕ ಅನ್ವೇಷಣೆಗೆ ಭಾರತೀಯ ಪ್ರತಿಭೆಗಳ ಕೊಡುಗೆಯನ್ನು ಮತ್ತೊಮ್ಮೆ ದೃಢೀಕರಿಸಿದೆ” ಎಂದು ಸಂಧು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Similar News