ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ವಿರುದ್ಧ ಸುಳ್ಳು ಜನ್ಮದಿನಾಂಕ ನೀಡಿದ ಆರೋಪ: ಎಫ್‌ಐಆರ್ ದಾಖಲು

Update: 2022-12-03 12:26 GMT

ಹೊಸದಿಲ್ಲಿ, ಡಿ.3: ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್, ಅವರ ಕುಟುಂಬ ಹಾಗೂ ಮಾಜಿ ರಾಷ್ಟ್ರೀಯ ಕೋಚ್ ವಿಮಲ್ ಕುಮಾರ್ ವಿರುದ್ಧ ವಂಚನೆ ಹಾಗೂ ಸುಳ್ಳು ಜನ್ಮ ದಿನಾಂಕ ನೀಡಿದ ಆರೋಪದಲ್ಲಿ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ.

2010ರಿಂದ ವಯೋಗುಂಪಿನ ಟೂರ್ನಮೆಂಟ್‌ಗಳಲ್ಲಿ ಆಡಲು ಸುಳ್ಳು ವಯಸ್ಸು ನಮೂದಿಸಿ 21ರ ಹರೆಯದ ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ತನ್ನ ಸಹೋದರ ಚಿರಾಗ್ ಸೇನ್ ಜೊತೆಗೂಡಿ ವಂಚಿಸಿದ್ದಾರೆ ಎಂದು ಎಂ.ಗವಿಯಪ್ಪ ನಾಗರಾಜ ಅವರು ಗುರುವಾರ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ದೂರಿನ ಪ್ರತಿಯಲ್ಲಿ ಸೇನ್ ಅವರ ತಂದೆ ಧೀರೇಂದ್ರ, ತಾಯಿ ನಿರ್ಮಲಾ ಹಾಗೂ 10 ವರ್ಷದಿಂದ ಕೋಚಿಂಗ್ ನೀಡುತ್ತಿರುವ ಕುಮಾರ್ ಅವರ ಹೆಸರು ಕೂಡ ಇದೆ.

ಈ ಎಲ್ಲರ ವಿರುದ್ಧ ಐಪಿಸಿ ಸೆಕ್ಷನ್‌ಗಳಡಿ ವಂಚನೆ(ಸೆಕ್ಷನ್ 420), ಫೋರ್ಚರಿ(468), ನಕಲಿ ದಾಖಲೆಯನ್ನು ಅಸಲಿ ಎಂದು ಬಳಕೆ(471)ಆರೋಪ ಹೊರಿಸಲಾಗಿದೆ.

Similar News