ಬ್ರೆಝಿಲ್‌ನ ಜೀಸಸ್, ಟೆಲೆ್ಲಸ್‌ಗೆ ಗಾಯ, ವಿಶ್ವ ಕಪ್‌ನಿಂದ ಔಟ್
Update: 2022-12-03 23:12 IST
ದೋಹಾ, ಡಿ.3: ಬ್ರೆಝಿಲ್‌ನ ಫಾರ್ವಡ್ ಆಟಗಾರ ಗೇಬ್ರಿಯಲ್ ಜೀಸಸ್ ಹಾಗೂ ಡಿಫೆಂಡರ್ ಅಲೆಕ್ಸ್ ಟೆಲ್ಲೆಸ್ ಅವರು ಕ್ಯಾಮರೂನ್ ವಿರುದ್ಧದ ತಮ್ಮ ಕೊನೆಯ ಗ್ರೂಪ್ ‘ಜಿ’ ಪಂದ್ಯದಲ್ಲಿ ಮೊಣಕಾಲು ಗಾಯಕ್ಕೆ ಒಳಗಾದ ನಂತರ ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ದೇಶದ ಫುಟ್ಬಾಲ್ ಸಂಸ್ಥೆ ಶನಿವಾರ ತಿಳಿಸಿದೆ.
ಆಟಗಾರರಾದ ಅಲೆಕ್ಸ್ ಟೆಲ್ಲೆಸ್ ಹಾಗೂ ಗೇಬ್ರಿಯಲ್ ಜೀಸಸ್ ಅವರು ಶನಿವಾರ ಬೆಳಗ್ಗೆ ಬ್ರೆಝಿಲ್ ತಂಡದ ವೈದ್ಯರಿಂದ ಟೆಸ್ಟ್‌ಗೆ ಒಳಗಾದರು. ಬಲ ಮೊಣಕಾಲಿನ ಎಂಆರ್‌ಐ ಪರೀಕ್ಷೆಯು ಗಾಯದ ವ್ಯಾಪ್ತಿಯನ್ನು ಹಾಗೂ 2022ರ ಫಿಫಾ ವಿಶ್ವಕಪ್‌ನ ಇನ್ನುಳಿದ ಪಂದ್ಯಗಳಲ್ಲಿ ಭಾಗವಹಿಸಲು ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ಅಸಾಧ್ಯವೆಂದು ದೃಢಪಡಿಸಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಸರ್ಬಿಯ ವಿರುದ್ಧದ ತನ್ನ ಮೊದಲ ಗೆಲುವಿನ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದ ಸ್ಟಾರ್ ಆಟಗಾರ ನೇಮರ್ ಇನ್ನೂ ಚೇತರಿಸಿಕೊಂಡಿಲ್ಲ.