ಥೈಲ್ಯಾಂಡ್‍ನಲ್ಲಿ ಬಾಂಬ್ ಸ್ಫೋಟ 3 ಮಂದಿ ಮೃತ್ಯು; ನಾಲ್ವರಿಗೆ ಗಾಯ

Update: 2022-12-06 17:00 GMT

ಬ್ಯಾಂಕಾಕ್, ಡಿ.6: ಥೈಲ್ಯಾಂಡ್‍(Thailand)ನ ದಕ್ಷಿಣದಲ್ಲಿರುವ ಸೊಂಗ್‍ಖ್ಲ ಪ್ರಾಂತದಲ್ಲಿ ರಸ್ತೆ ಬದಿಯಲ್ಲಿರಿಸಿದ್ದ ಬಾಂಬ್ ಸ್ಫೋಟಿಸಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು ಇತರ ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.

ಮಲೇಶ್ಯಾದ ಗಡಿಯ ಬಳಿಯಿರುವ  ಈ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ  ಹಾನಿಗೊಳಗಾಗಿದ್ದ ರೈಲ್ವೇ ಹಳಿಯನ್ನು ದುರಸ್ತಿಗೊಳಿಸಲು ರೈಲ್ವೇ ಇಲಾಖೆಯ 7 ಸಿಬಂದಿಗಳು ತೆರಳುತ್ತಿದ್ದಾಗ ಮಾರ್ಗದ ಬದಿಯಲ್ಲಿ ಅಡಗಿಸಿಟ್ಟಿದ್ದ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ.

ಶನಿವಾರ ನಡೆದ ಸ್ಫೋಟದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಈ ಬಾಂಬನ್ನು ಇರಿಸಲಾಗಿತ್ತು. ಸ್ಫೋಟದಲ್ಲಿ 3 ಸಿಬಂದಿಗಳು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News