ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

Update: 2022-12-07 13:56 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ, ಭಾರತದ ಹೆಮ್ಮೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಕೊಲಂಬಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲೂ ಬೆಳ್ಳಿ ಪದಕ ಜಯಿಸಿದ್ದಾರೆ.

49 ಕೆ.ಜಿ.ವಿಭಾಗದಲ್ಲಿ ಒಟ್ಟು 200 ಕೆಜಿ ಭಾರ ಎತ್ತಿದ ಮೀರಾಬಾಯಿ ಚಾನು ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ಸ್ನ್ಯಾಚ್ ವಿಭಾಗದಲ್ಲಿ 87ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್  ವಿಭಾಗದಲ್ಲಿ ಮೀರಾಬಾಯಿ 113 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.

ಈ ವಿಭಾಗದಲ್ಲಿ ಒಟ್ಟು 206 ಕೆಜಿ ಭಾರ ಎತ್ತಿದ ಚೀನಾದ ಜಿಯಾಂಗ್ ಹುಯಿಹುವಾ ಚಿನ್ನದ ಪದಕ ಜಯಿಸಿದರು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಇನ್ನೋರ್ವ ಸ್ಪರ್ಧಿ ಹೋವ್ ಝಿಹು ಕಂಚಿನ ಪದಕ ಜಯಿಸಿದ್ದಾರೆ.

2017ರ ಚಾಂಪಿಯನ್ ಮೀರಾಬಾಯಿ ಈಗ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 2ನೇ ಬಾರಿ ಪದಕ ಜಯಿಸಿದ್ದಾರೆ.

Similar News