ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ: ಫೀಲ್ಡಿಂಗ್ ವೇಳೆ ರೋಹಿತ್ ಶರ್ಮಾಗೆ ಗಾಯ

Update: 2022-12-07 13:59 GMT

ಮೀರ್ ಪುರ: ಬಾಂಗ್ಲಾದೇಶ ವಿರುದ್ಧ ಬುಧವಾರ ಮೀರ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ Rohit Sharma ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡ ನಂತರ ಭಾರತೀಯ ಕ್ರಿಕೆಟ್ ತಂಡವು ಭಾರೀ  ಗಾಯದ ಭೀತಿಯನ್ನು ಎದುರಿಸುತ್ತಿದೆ.

 ಬಿಸಿಸಿಐ ವೈದ್ಯಕೀಯ ತಂಡವು ರೋಹಿತ್ ರನ್ನು ತಪಾಸಣೆ ಮಾಡಿದೆ ಮತ್ತು ಅವರನ್ನು ಸ್ಕ್ಯಾನಿಂಗ್ ಗೆ ಕರೆದೊಯ್ಯಲಾಗಿದೆ. ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡ ನಂತರ ಪಂದ್ಯದ ಎರಡನೇ ಓವರ್‌ನಲ್ಲಿ ರೋಹಿತ್ ಗೆ ಗಾಯವಾಗಿದೆ. ಮುಹಮ್ಮದ್ ಸಿರಾಜ್ ಎಸೆದ ಓವರ್‌ನ ನಾಲ್ಕನೇ ಎಸೆತವನ್ನು ಅನಾಮುಲ್ ಹಕ್ ಸ್ಲಿಪ್ ನತ್ತ ಹೊಡೆದರು. ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಚೆಂಡನ್ನು ಹಿಡಿಯಲು ಯತ್ನಿಸಿದಾಗ ಅವರ ಹೆಬ್ಬೆರಳಿಗೆ ಗಾಯವಾಯಿತು. ಅವರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿದೆರಜತ್ ಪಾಟಿದಾರ್ ಅವರು ರೋಹಿತ್ ಬದಲಿಗೆ ಮೈದಾನಕ್ಕೆ ಇಳಿದರು.

"ಭಾರತದ ನಾಯಕ ರೋಹಿತ್ ಶರ್ಮಾ 2 ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅವರ ಹೆಬ್ಬೆರಳಿಗೆ ಪೆಟ್ಟು ಬಿದ್ದಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರೀಕ್ಷೆ  ಮಾಡಿದೆ. ಅವರು ಈಗ ಸ್ಕ್ಯಾನಿಂಗ್ ಗೆ ತೆರಳಿದ್ದಾರೆ" ಎಂದು ಬಿಸಿಸಿಐ ಟ್ವೀಟರ್ ನಲ್ಲಿ ತಿಳಿಸಿದೆ.

ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಲಿಟನ್ ದಾಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಗೆಲ್ಲಲೇಬೇಕಾದ ಪಂದ್ಯದಲ್ಲಿ  ಭಾರತ ಒಂದೆರಡು ಬದಲಾವಣೆ ಮಾಡಿತ್ತು.  ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಒಂದು ವಿಕೆಟ್‌ನಿಂದ ಸೋತಿತ್ತು.

Similar News