ಅಫ್ಘಾನ್: ಕೊಲೆ ಆರೋಪಿಗೆ ಸಾರ್ವಜನಿಕ ಮರಣದಂಡನೆ

Update: 2022-12-07 17:47 GMT

ಕಾಬೂಲ್, ಡಿ.7: ಕೊಲೆ ಪ್ರಕರಣದ ಆರೋಪಿಯನ್ನು ತಾಲಿಬಾನ್ ಆಡಳಿತ ಮಂಗಳವಾರ ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2017ರಲ್ಲಿ ವ್ಯಕ್ತಿಯೊಬ್ಬನನ್ನು ಚೂರಿಯಿಂದ ಇರಿದು ಹತ್ಯೆಗೈದ ಆರೋಪದಲ್ಲಿ ಪ್ರಕರಣ ಎದುರಿಸುತ್ತಿದ್ದ ಆರೋಪಿಗೆ ಸಾರ್ವಜನಿಕ ಮರಣದಂಡನೆ ಶಿಕ್ಷೆ ಜಾರಿಯಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಮೂರು ನ್ಯಾಯಾಲಯಗಳು ನಡೆಸಿ ನೀಡಿದ ತೀರ್ಪಿನ ಆಧಾರದಲ್ಲಿ ಪಶ್ಚಿಮ ಅಫ್ಘಾನ್‌ನ ಫರಾಹ್ ಪ್ರಾಂತದಲ್ಲಿ ಸಾರ್ವಜನಿಕ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು ಈ ಸಂದರ್ಭ ತಾಲಿಬಾನ್‌ನ ಉನ್ನತ ಅಧಿಕಾರಿಗಳು ಹಾಜರಿದ್ದರು ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ದೇಶದ ಆಡಳಿತವನ್ನು ವಶಪಡಿಸಿಕೊಂಡ ಬಳಿಕ ಇದು ಮೊದಲ ಸಾರ್ವಜನಿಕ ಮರಣದಂಡನೆ ಶಿಕ್ಷೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Similar News