ಮತ್ತೊಮ್ಮೆ ರೊನಾಲ್ಡೊ ಇಲ್ಲದೆ ಕ್ವಾರ್ಟರ್ ಫೈನಲ್ ಕಾದಾಟಕ್ಕಿಳಿದ ಪೋರ್ಚುಗಲ್

Update: 2022-12-10 15:13 GMT

  ದೋಹಾ, ಡಿ.10:ಪೋರ್ಚುಗಲ್ ತಂಡ ಫಿಫಾ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊರಿಲ್ಲದೆ Cristiano Ronaldo ಕಾದಾಟಕ್ಕೆ ಇಳಿದಿದೆ.

ಅಲ್ ತುಮಾಮ ಸ್ಟೇಡಿಯಮ್‌ನಲ್ಲಿ ಮೊರೊಕ್ಕೊ ವಿರುದ್ಧ ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊನಾಲ್ಡೊಗೆ ಆಡುವ ಅವಕಾಶ ನೀಡಲಾಗಿಲ್ಲ. ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಅವರು ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪೋರ್ಚುಗಲ್ ತನ್ನ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿ ಸೆಮಿ ಫೈನಲ್ ತಲುಪುವ ಗುರಿ ಇಟ್ಟುಕೊಂಡಿದೆ. 2006ರಲ್ಲಿ ಕೊನೆಯ ಬಾರಿ ಈ ಸಾಧನೆ ಮಾಡಿತ್ತು.

ರೊನಾಲ್ಡೊಗೆ 2ನೇ ಬಾರಿ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಸ್ವಿಟ್ಸರ್‌ಲ್ಯಾಂಡ್ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲೂ ರೊನಾಲ್ಡೊರನ್ನು ಹೊರಗಿಡಲಾಗಿತ್ತು. ರೊನಾಲ್ಡೊರ ಬದಲಿಗೆ ಆಡಿದ್ದ 21ರ ಹರೆಯದ ಗೊನ್ಸಾಲೊ ರಾಮೋಸ್ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದ್ದರು.

ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ ನಂತರ ರೊನಾಲ್ಡೊ ಹಾಗೂ ತಂಡದ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಹಿರಿಯ ಆಟಗಾರ ವಿಶ್ವಕಪ್ ಅಭಿಯಾನದಿಂದ ಹೊರಗುಳಿಯುವುದಾಗಿ ಬೆದರಿಸಿದ್ದಾರೆಂದು ವರದಿಯಾಗಿತ್ತು. ಪೋರ್ಚುಗಲ್ ಫುಟ್ಬಾಲ್ ಮಂಡಳಿಯು ಈ ಸುದ್ದಿಯನ್ನು ಅಲ್ಲಗಳೆದಿತ್ತು.

Similar News