×
Ad

ಇರಾನ್ ಮಹಿಳೆಯರು ಟೈಮ್ಸ್ `ವರ್ಷದ ಹೀರೋಗಳು'

Update: 2022-12-10 22:54 IST

ನ್ಯೂಯಾರ್ಕ್,  ಡಿ.10: ಟೈಮ್ಸ್ ಪತ್ರಿಕೆಯ 2022ರ ವರ್ಷದ ಹೀರೋಗಳ ಗೌರವಕ್ಕೆ ಇರಾನ್‍(Iran)ನ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಮೂಲಗಳು ಹೇಳಿವೆ.

ಇರಾನ್‍ನ ಇಸ್ಲಾಮಿಕ್ ರಿಪಬ್ಲಿಕ್ ವಿರುದ್ಧದ ವ್ಯಾಪಕ ಪ್ರತಿಭಟನೆಯಲ್ಲಿ ಅಲ್ಲಿನ ಮಹಿಳೆಯರು ವಹಿಸಿರುವ ಪ್ರಮುಖ ಪಾತ್ರವನ್ನು ಗಮನಿಸಿ ಈ ಆಯ್ಕೆ ಮಾಡಲಾಗಿದೆ. ಇರಾನ್‍ನ ವಿದ್ಯಾವಂತ, ಜಾತ್ಯಾತೀತ ಮತ್ತು ಉದಾರವಾದಿ ಮಹಿಳೆಯರು ಮಹಾಸಿ ಅಮೀನಿಯ ಹತ್ಯೆಯನ್ನು ಪ್ರತಿಭಟಿಸಲು ಸೆಪ್ಟಂಬರ್ ಮಧ್ಯದಲ್ಲಿ ಬೀದಿಗಿಳಿದರು ಎಂದು ಪತ್ರಿಕೆ ಹೇಳಿದೆ.  

Similar News