×
Ad

ಟಿ-20: ಭಾರತದ ಮಹಿಳಾ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ ಜಯ

Update: 2022-12-12 07:28 IST

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತೀಯ ಮಹಿಳಾ ತಂಡ, ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ 2022ರ ಮೊದಲ ಸೋಲಿನ ರುಚಿ ತೋರಿಸಿತು. 2022ರಲ್ಲಿ ಯಾವುದೇ ಬಗೆಯ ಕ್ರಿಕೆಟ್‍ನಲ್ಲಿ ಆಸ್ಟ್ರೇಲಿಯಾ ಸೋಲು ಕಾಣುತ್ತಿರುವುದು ಇದೇ ಮೊದಲು.

ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮತ್ತೆ ಭಾರತೀಯ ಬೌಲರ್‌ಗಳು ಪ್ರಭಾವಿ ಪ್ರದರ್ಶನ ತೋರಲು ವಿಫಲರಾದರು.

ಬೆತ್ ಮೂನಿ (54 ಎಸೆತಗಳಲ್ಲಿ 82) ಮತ್ತು ತಹಿಲಾ ಮೆಕ್‍ಗ್ರಾತ್ (51 ಎಸೆತಗಳಲ್ಲಿ 70) ಅವರ ಉತ್ತಮ ಬ್ಯಾಟಿಂಗ್‍ನಿಂದ ಪ್ರವಾಸಿ ತಂಡ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು.

188 ರನ್‍ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ ಭಾರತದ ಸ್ಮೃತಿ ಮಂದಾನ (79) ಮತ್ತು ರಿಚಾ ಘೋಷ್ (13 ಎಸೆತಗಳಲ್ಲಿ ನಾಟೌಟ್ 26) ಅವರ ಅದ್ಭುತ ಪ್ರದರ್ಶನದೊಂದಿಗೆ ಗೆಲುವಿನ ಗುರಿ ತಲುಪಿತು.

ಕೊನೆಯ ಓವರ್‍ನಲ್ಲಿ 14 ರನ್ ಅಗತ್ಯವಿದ್ದಾಗ ಮೇಘನ್ ಶುಟ್ ಮತ್ತು ದೇವಿಕಾ ವೈದ್ಯ 2 ಬೌಂಡರಿಗಳನ್ನು ಹೊಡೆದು 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್‍ಗೆ ಒಯ್ದರು.

ಸೂಪರ್ ಓವರ್‍ನಲ್ಲಿ ಪ್ರವಾಸಿಗರಿಗೆ 21 ರನ್‍ಗಳ ಗುರಿ ನೀಡಿದ ಭಾರತದ ಸವಾಲನ್ನು ಬೆನ್ನಟ್ಟಲು ವಿಫಲವಾದ ಆಸ್ಟ್ರೇಲಿಯಾ (1 ವಿಕೆಟ್‍ಗೆ 16) ಸೋಲೊಪ್ಪಿಕೊಂಡಿತು. 5 ಪಂದ್ಯಗಳ ಸರಣಿ ಇದೀಗ 1-1 ಸಮಬಲದಲ್ಲಿದೆ.

Similar News