ಚೀನಾಕ್ಕೆ ಅಮೆರಿಕ ನಿಯೋಗದ ಭೇಟಿ

Update: 2022-12-12 16:47 GMT

ಬೀಜಿಂಗ್, ಡಿ.12: ಅಮೆರಿಕದ ಹಿರಿಯ ರಾಜತಾಂತ್ರಿಕರನ್ನು ಒಳಗೊಂಡ ನಿಯೋಗ ಚೀನಾಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆ ಹಾಗೂ ತೈವಾನ್ (Taiwan)ವಿಷಯದ ಬಗ್ಗೆ ಚರ್ಚೆ ನಡೆಸಿದೆ ಎಂದು ಚೀನಾ(China) ಆಡಳಿತ ಸೋಮವಾರ ಹೇಳಿದೆ.

ಪೂರ್ವ ಏಶ್ಯಾ ವಿಭಾಗಕ್ಕೆ ಸಂಬಂಧಿಸಿದ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಡೇನಿಯಲ್ ಕ್ರಿಟೆನ್ಬ್ರಿಂಕ್, ರಾಷ್ಟ್ರೀಯ ಭದ್ರತಾ ಮಂಡಳಿಯ ಚೀನಾ ಮತ್ತು ತೈವಾನ್  ವ್ಯವಹಾರ ವಿಭಾಗದ ಹಿರಿಯ ನಿರ್ದೇಶಕಿ ಲಾರಾ ರೋಸೆನ್ಬರ್ಗರ್(Laura Rosenberger), ಚೀನಾದ ಉಪ ವಿದೇಶಾಂಗ ಸಚಿವ ಕ್ಸೀಪೆಂಗ್ (Xiepeng)ಉಪಸ್ಥಿತಿಯಲ್ಲಿ ಉತ್ತರದ ಹೆಬೆಯ್ ಪ್ರಾಂತದಲ್ಲಿ ಸಭೆ ನಡೆದಿದೆ ಎಂದು ಚೀನಾ ಹೇಳಿದೆ.

ಇಬ್ಬರು ಅಧ್ಯಕ್ಷರ ಮಧ್ಯೆ ಬಾಲಿ ಶೃಂಗಸಭೆಯಲ್ಲಿ ತಲುಪಿದ್ದ ಒಮ್ಮತವನ್ನು ಜಾರಿಗೊಳಿಸುವ ಬಗ್ಗೆ ಆಳವಾಗಿ ಚರ್ಚಿಸಲಾಗಿದೆ. ತೈವಾನ್ನ ವಿಷಯವನ್ನೂ ಚರ್ಚಿಸಲಾಗಿದ್ದು ಎಲ್ಲಾ ಹಂತಗಳಲ್ಲೂ ಅಭಿಪ್ರಾಯ ವಿನಿಮಯವನ್ನು ಬಲಪಡಿಸಲು ಮತ್ತು ಸಂವಹನವನ್ನು ನಿರ್ವಹಿಸಲು ಒಪ್ಪಲಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ಚೀನಾಕ್ಕೆ ಅಮೆರಿಕ ನಿಯೋಗದ ಭೇಟಿಯು 2023ರ ಆರಂಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ರ ಚೀನಾ ಭೇಟಿ ಕಾರ್ಯಕ್ರಮಕ್ಕೆ ವೇದಿಕೆ ರೂಪಿಸಲಿದೆ ಎಂದು ಕಳೆದ ವಾರ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿತ್ತು. 

Similar News