ಶಿಕ್ಷಣ ಸಂಸ್ಥೆಗಳಲ್ಲಿ ಚೀನೀ ಭಾಷೆ ಕಲಿಕೆಗೆ ಕ್ರಮ: ಸೌದಿ ಅರೆಬಿಯ

Update: 2022-12-14 17:29 GMT

ರಿಯಾದ್, ಡಿ.14: ಶೀಘ್ರದಲ್ಲಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಚೀನೀ ಭಾಷೆ ಮತ್ತು ಸಾಹಿತ್ಯವನ್ನು ಪಠ್ಯಕ್ರಮದ ಭಾಗವಾಗಿ ಕಲಿಸಲು ಪ್ರಾರಂಭಿಸುವುದಾಗಿ ಸೌದಿ ಅರೆಬಿಯಾ ಹೇಳಿದೆ.

ಈ ಕುರಿತ ಒಪ್ಪಂದಕ್ಕೆ ಎರಡೂ ದೇಶಗಳ ಶಿಕ್ಷಣ ಇಲಾಖೆ ಸಹಿ ಹಾಕಿವೆ. ಭವಿಷ್ಯದಲ್ಲಿ ಚೀನೀ ಭಾಷೆ ಅತ್ಯಂತ ಪ್ರಭಾವೀ ಭಾಷೆಯಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನೀ ಭಾಷೆ ಮತ್ತು ಬೋಧನಾ ಕ್ರಮದಲ್ಲಿ ಸೌದಿ ಶಿಕ್ಷಕರಿಗೆ ತರಬೇತಿ ಒದಗಿಸಲಾಗುವುದು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಸಹ ಚೀನೀ ಭಾಷೆಯನ್ನು ಕಲಿಯುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸೌದಿಯ ಕಿಂಗ್ ಅಬ್ದುಲ್ಲಝೀರ್ ವಿವಿಯ ಅಸಿಸ್ಟೆಂಟ್ ಪ್ರೊಫೆಸರ್ ಮುಹಮ್ಮದ್ ಅಸಿರಿ ಹೇಳಿದ್ದಾರೆ.

Similar News